alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ಫೀಸ್ ಕಟ್ಟದ ವಿದ್ಯಾರ್ಥಿಗೆ ಇದೆಂತಾ ಶಿಕ್ಷೆ

BEATEN TO DEATHನಿಗದಿತ ಸಮಯಕ್ಕೆ ಫೀಸ್ ಕಟ್ಟದೇ ಇದ್ದ ತಪ್ಪಿಗೆ 6ನೇ ತರಗತಿ ಬಾಲಕನನ್ನು ಶಾಲಾ ಸಿಬ್ಬಂದಿ ಥಳಿಸಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಇಂಫಾಲದಲ್ಲಿ ನಡೆದಿದೆ. ಹತ್ಯೆಯಾದ ವಿದ್ಯಾರ್ಥಿ ಸುರೇಶ್ ತೊಂಗಬ್ರಮ್, ಇಂಫಾಲ ಬಳಿಯ ಲಂಗೋಲ್ ನಲ್ಲಿರುವ ರೆಸಿಡೆನ್ಷಿಯಲ್ ಕಿಡ್ಸ್ ಕೇರ್ ಸ್ಕೂಲ್ ನಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ.

2 ವರ್ಷಗಳ ಹಿಂದಷ್ಟೆ ಈ ಶಾಲೆಗೆ ಅವನನ್ನು ದಾಖಲಿಸಲಾಗಿತ್ತು. ಅವನದ್ದು ಬಡ ರೈತ ಕುಟುಂಬ. ಶಾಲೆ ಮತ್ತು ಹಾಸ್ಟೆಲ್ ಫೀಸ್ ಕಟ್ಟಲು ಸುರೇಶ್ ತಂದೆ ಬೀರಾ ತೊಂಗಬ್ರಮ್ ಅವರಿಂದ ಸಾಧ್ಯವಾಗಿರಲಿಲ್ಲ. ಫೀಸ್ ಕಟ್ಟಿ ಇಲ್ಲವೇ ನಿಮ್ಮ ಮಗನನ್ನು ಮನೆಗೆ ಕರೆದುಕೊಂಡು ಹೋಗಿ ಅಂತಾ ಶಾಲೆಯ ಆಡಳಿತ ಮಂಡಳಿಯವರು ಎಚ್ಚರಿಸಿದ್ರು. ಮಗನನ್ನು ಕರೆದೊಯ್ಯಲು ಹೋದ್ರೆ, ಫೀಸ್ ಭರಿಸಿದ ಮೇಲಷ್ಟೆ ಸುರೇಶ್ ನನ್ನು ಕಳಿಸಿಕೊಡುವುದಾಗಿ ಹೇಳಿದ್ದಾರೆ. ಕಳೆದ ಶುಕ್ರವಾರ ಶಾಲೆಯ ಸಿಬ್ಬಂದಿ ನನ್ನ ಮಗನನ್ನು ಕರೆತಂದ್ರು, ಸುರೇಶ್ ಮೈಮೇಲೆಲ್ಲ ಬಾಸುಂಡೆ ಎದ್ದಿತ್ತು. ಗಾಯಗಳಿಂದ ಆತ ಬಳಲಿದ್ದ. ಅಶಿಸ್ತು ತೋರಿದ್ದಕ್ಕೆ ಅವನನ್ನು ಶಿಕ್ಷಿಸಿರುವುದಾಗಿ ಹೇಳಿದ ಅವರು ಆಗಸ್ಟ್ 31 ರೊಳಗೆ ಶುಲ್ಕ ಭರಿಸುವಂತೆ ಎಚ್ಚರಿಸಿ ಹೋಗಿದ್ದರು ಎನ್ನುತ್ತಾರೆ ಬೀರಾ.

ಅವರು ಕರೆತರುತ್ತಿದ್ದಂತೆ ಮನೆಯಲ್ಲೇ ಕುಸಿದು ಬಿದ್ದ ಬಾಲಕ ಸುರೇಶ್ ಮೃತಪಟ್ಟಿದ್ದಾನೆ. ಮಗನ ಸಾವಿಗೆ ಕಾರಣರಾದ ಶಾಲೆಯ ಆಡಳಿತ ಮಂಡಳಿಯವರಿಗೆ ತಕ್ಕ ಶಿಕ್ಷೆಯಾಗದ ಹೊರತು ಮೃತದೇಹ ಸ್ವೀಕರಿಸುವುದಿಲ್ಲ ಅಂತಾ ಬೀರಾ ಹೇಳಿದ್ದಾರೆ. ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...