alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಕಾಲೇಜು ಬಿಟ್ಲು ವಿದ್ಯಾರ್ಥಿನಿ

ಉತ್ತರ ಪ್ರದೇಶದ ಬಹರೈಚ್ ನಲ್ಲಿ ವಿದ್ಯಾರ್ಥಿಯೊಬ್ಬಳು ಕಾಲೇಜ್ ಗೆ ಹೋಗೋದನ್ನು ಬಿಟ್ಟಿದ್ದಾಳೆ. ಇದಕ್ಕೆ ದಾರಿಯಲ್ಲಿ ಹುಡುಗ್ರು ಮಾಡುವ ಟೀಸಿಂಗ್ ಕಾರಣ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಹುಡುಗ್ರ ಟೀಸಿಂಗ್ ಗೆ ಭಯಗೊಂಡಿರುವ ಹುಡುಗಿ ತಾಯಿ ಜೊತೆ ಎಎಸ್ ಪಿ ಬಳಿ ಬಂದು ದೂರು ದಾಖಲಿಸಿದ್ದಾಳೆ. ಫ್ಲರ್ಟ್ ಮಾಡುವ  ಹುಡುಗ್ರನ್ನು ಬಂಧಿಸುವುದಾಗಿ ಎಎಸ್ಪಿ ಭರವಸೆ ನೀಡಿದ್ದಾರೆ.

ಘಟನೆ ದರ್ಗಾ ಪ್ರದೇಶದಲ್ಲಿ ನಡೆದಿದೆ. ವುಮೆನ್ಸ್ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಗೆ ದಾರಿಯಲ್ಲಿ ಕೆಲ ಹುಡುಗ್ರು ಟೀಸಿಂಗ್ ಮಾಡ್ತಿದ್ದಾರಂತೆ. ಅವರಿಂದಾಗಿ ಮನೆಯಿಂದ ಹೊರ ಬರಲೂ ವಿದ್ಯಾರ್ಥಿನಿ ಭಯಪಡ್ತಿದ್ದಾಳೆ. ಕಿರುಕುಳ ನೀಡುವ ಹುಡುಗ್ರನ್ನು ಬಂಧಿಸದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಎಸ್ಪಿ ಕಮಲೇಶ್ ದೀಕ್ಷಿತ್ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿ ಕಾಲೇಜಿಗೆ ಹೋಗುವಂತೆ ಸಲಹೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...