alex Certify
ಕನ್ನಡ ದುನಿಯಾ       Mobile App
       

Kannada Duniya

‘ಸ್ಟ್ರಾಂಗ್ ಈಸ್ ಸೆಕ್ಸಿ’ ಎಂದ ಸಾನಿಯಾ ಮಿರ್ಜಾ

sania

ನವದೆಹಲಿ: ಟೈಮ್ ನಿಯತಕಾಲಿಕ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ಹಲವಾರು ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಹಲವರು ಸ್ಥಾನ ಪಡೆದಿದ್ದಾರೆ.

ಇದೇ ಸಂದರ್ಭದಲ್ಲಿ ಸಾನಿಯಾ ನೀಡಿದ ಹೇಳಿಕೆಯೊಂದು ಗಮನ ಸೆಳೆದಿದೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು, ಸಪೂರ ದೇಹಕ್ಕಿಂತ ಬಲಶಾಲಿಯಾದ ದೇಹ ಹೊಂದುವುದೇ ಹೆಚ್ಚು ಆಕರ್ಷಣೀಯ. ಬಲಶಾಲಿಯಾಗಿರುವುದೇ ಸೆಕ್ಸಿ(ಸ್ಟ್ರಾಂಗ್ ಈಸ್ ಸೆಕ್ಸಿ) ಎಂದು ಹೇಳಿದ್ದಾರೆ. ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರೇ ಹೇಳಿರುವಂತೆ, ಟೆನಿಸ್ ಆಟಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಟೆನಿಸ್ ಇಲ್ಲದ ಜೀವನವಿಲ್ಲ. ಅದಕ್ಕಾಗಿ ಫಿಟ್ ನೆಸ್ ಕಾಯ್ದುಕೊಳ್ಳಬೇಕಿದೆ.

ಮತ್ತೊಂದು ವಿಷಯವೆಂದರೆ, ಸಾನಿಯಾ ಅವರ ಜೀವನ ಚರಿತ್ರೆ ಹೊರಬರಲಿದೆ. ಈ ಪುಸ್ತಕದಲ್ಲಿ ಅವರು ಆಟ, ಫಿಟ್ ನೆಸ್ ಬಗ್ಗೆ ಹೇಳಿಕೊಂಡಿದ್ದಾರೆನ್ನಲಾಗಿದೆ. ಇದರೊಂದಿಗೆ ಅವರ ಜೀವನ ಆಧರಿಸಿ ಸಿನಿಮಾ ಕೂಡ ಮೂಡಿಬರಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...