alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬೀದಿ ನಾಯಿಗೆ ಬೆದರಿದ ಚಿರತೆ ವಿಡಿಯೋ

ಜೈಪುರ: ಬೇಟೆಯಾಡಲು ಬಂದ ಚಿರತೆ, ನಾಯಿಯನ್ನು ಕಂಡು ಹೆದರಿ ಓಡಿರುವ ವಿಚಿತ್ರ ಘಟನೆ ರಾಜಸ್ತಾನದ ಜುಲ್ಹಾನ ಮೀಸಲು ಅರಣ್ಯದಲ್ಲಿ ನಡೆದಿದೆ.

ಇಲ್ಲಿನ‌ ಚಿರತೆ ಸಫಾರಿಯಲ್ಲಿ ಮಂಗಳವಾರ ಈ‌ ಘಟನೆ ನಡೆದಿದೆ. ಪ್ರವಾಸಿಗರ ಗುಂಪು ಜಿಪ್ಸಿ ವಾಹನದಲ್ಲಿ ಹೋಗುತ್ತಿರುವಾಗ, ಚಿರತೆ ಅಡ್ಡಬಂದಿದೆ. ಅದಕ್ಕಾಗಿ‌ ವಾಹನ ನಿಲ್ಲಿಸಿದ್ದರು.
ಇದೇ ಸಂದರ್ಭದಲ್ಲಿ ಬೀದಿನಾಯಿಯೊಂದು ಸಫಾರಿಗೆ ಹೋಗುವ ಮಾರ್ಗದಲ್ಲಿ ಮಲಗಿತ್ತು. ಇದನ್ನು ಬೇಟೆಯಾಡಲು ಚಿರತೆ ಮುಂದಾಗಿದೆ.‌

ಆರಂಭದಲ್ಲಿ ಚಿರತೆ ದಾಳಿಗೆ ನಾಯಿ ಬೆದರಿದರೂ, ಬೊಗಳುವ ಮೂಲಕ ಚಿರತೆಯನ್ನು ಹೆದರಿಸಿ ವಾಪಾಸು ಪೊದೆಗೆ ಓಡಿಸುವಲ್ಲಿ‌ ಯಶಸ್ವಿಯಾಗುವುದರೊಂದಿಗೆ ಜೀವ ಉಳಿಸಿಕೊಂಡಿದೆ.

ಜೀವ ರಕ್ಷಣೆಗೆ ನಾಯಿ ಮಾಡಿದ ಸಾಹಸದ ವಿಡಿಯೋವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...