alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಗೆ ಕೂರಿಸದ್ದಕ್ಕೆ ಆಘಾತಗೊಂಡ ವಿದ್ಯಾರ್ಥಿಗೆ ಹೃದಯಾಘಾತ

ಪರೀಕ್ಷೆಯ ಫೀಸ್ ಬಾಕಿ ಉಳಿಸಿಕೊಂಡ ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ,  ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

20 ವರ್ಷದ ಮೋಹನ್ ಲಾಲ್, ಸತ್ನಾದ ರಾಮಕೃಷ್ಣ ಕಾಲೇಜಿನಲ್ಲಿ ಕಂಪ್ಯೂಟರ್ ಡಿಗ್ರಿ ಓದುತ್ತಿದ್ದ. ಈತ ಆಗಲೇ 25,700 ರೂ. ಫೀಸನ್ನೂ ಕಟ್ಟಿ, ಕೇವಲ 300 ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದ್ದ.

ಹೀಗಾಗಿ ಮೋಹನ್ ಲಾಲ್ ಗೆ ಕಾಲೇಜು ಆಡಳಿತ ಮಂಡಳಿ ಪರೀಕ್ಷೆಗೆ ಕೂರಿಸಲಿಲ್ಲ. ಇದ್ರಿಂದ ಮೋಹನ್ ಲಾಲ್ ತೀವ್ರ ಆಘಾತಕ್ಕೊಳಗಾದ. ಇದೇ ವಿಚಾರದಿಂದ ತನ್ನ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಕೇವಲ 300 ರೂಪಾಯಿಗೆ ಒಬ್ಬ ಯುವಕನ ಭವಿಷ್ಯದ ಜೊತೆಗೆ ಆಟವಾಡಿ ಅವನ ಜೀವಕ್ಕೆ ಕುತ್ತು ತಂದ ಕಾಲೇಜಿನ ವಿರುದ್ಧ ಸಂಬಂಧಿಕರು ಪ್ರತಿಭಟನೆ ನಡೆಸಿದ್ರು. ರಸ್ತೆ ಅಡ್ಡಗಟ್ಟಿ ಕಾಲೇಜು ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು. ಆದ್ರೆ ಜಿಲ್ಲಾಡಳಿತ ಇದೂವರೆಗೂ ಕಾಲೇಜು ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...