alex Certify
ಕನ್ನಡ ದುನಿಯಾ       Mobile App
       

Kannada Duniya

ಫಸ್ಟ್ ನೈಟ್ ಕನ್ಯತ್ವ ಪರೀಕ್ಷೆ ವಿರುದ್ಧ ಹೀಗಿದೆ ಅಭಿಯಾನ

ಪುಣೆ: ಕಂಜರ್ ಭಾತ್ ಸಮುದಾಯದಲ್ಲಿ ಮದುವೆಯಾದ ಮೊದಲ ರಾತ್ರಿ ಕನ್ಯತ್ವ ಪರೀಕ್ಷೆಗಾಗಿ ಅನಿಷ್ಟ ಪದ್ಧತಿಯನ್ನು ಅನುಸರಿಸಲಾಗ್ತಿದೆ. ಹಳ್ಳಿ ಪಂಚಾಯಿತಿಯಿಂದ ನವದಂಪತಿ ಫಸ್ಟ್ ನೈಟ್ ಮಲಗುವ ಹಾಸಿಗೆಯ ಮೇಲೆ ಬಿಳಿ ಬಣ್ಣದ ಬಟ್ಟೆಯನ್ನು ಹಾಸಲಾಗುತ್ತದೆ.

ಬಟ್ಟೆಯ ಮೇಲೆ ರಕ್ತದ ಕಲೆ ಕಂಡು ಬಂದಲ್ಲಿ ಆಕೆ ಕನ್ಯತ್ವ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳೆ ಎಂದು ಭಾವಿಸಲಾಗುತ್ತದೆ. ಒಂದು ವೇಳೆ ರಕ್ತದ ಕಲೆ ಕಂಡು ಬರದಿದ್ದಲ್ಲಿ ಆಕೆ ಮದುವೆಗೂ ಮೊದಲು ದೈಹಿಕ ಸಂಪರ್ಕ ಹೊಂದಿದ್ದಾಳೆ ಎಂದು ಹೇಳಲಾಗುತ್ತದೆ. ವಿರೋಧದ ನಡುವೆಯೂ ಈ ಅನಿಷ್ಟ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗ್ತಿದೆ.

ಇದಕ್ಕೆ ಕಡಿವಾಣ ಹಾಕಲು ಸಮುದಾಯದ ಯುವಕರು, ಯುವತಿಯರು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಕನ್ಯತ್ವ ಪರೀಕ್ಷೆಯ ವಿರುದ್ಧ ಅಭಿಯಾನ ಕೈಗೊಂಡಿದ್ದಾರೆ.

ಸಂಪ್ರದಾಯದ ಹೆಸರಲ್ಲಿ ಅನಿಷ್ಟ ಪದ್ಧತಿ ಅನುಸರಿಸುತ್ತಿರುವ ಕುರಿತಾಗಿ ಜಾಗೃತಿ ಮೂಡಿಸಲಾಗ್ತಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ ಎಂದು ಮುಂಬೈ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿರುವ, ವಾಟ್ಸಾಪ್ ಗ್ರೂಪ್ ಅಡ್ಮಿನ್ ವಿವೇಕ್ ತಮೈಚೇಕರ್ ತಿಳಿಸಿದ್ದಾರೆ.

ಕನ್ಯತ್ವ ಪರೀಕ್ಷೆ ವಿರುದ್ಧ ನಡೆಸುತ್ತಿರುವ ಅಭಿಯಾನಕ್ಕೆ ಯುವಕರು, ಯುವತಿಯರು ಸಾಥ್ ನೀಡಿದ್ದಾರೆ. ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...