alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ಕಲಿಸುತ್ತಿದ್ದ ಮುಸ್ಲಿಂ ಯುವತಿಗೆ ಕೊಲೆ ಬೆದರಿಕೆ

ಜಾರ್ಖಂಡ್ ನ ರಾಂಚಿ ಜಿಲ್ಲೆಯಲ್ಲಿ ಯೋಗ ಕಲಿಸುತ್ತಿದ್ದ ಮುಸ್ಲಿಂ ಯುವತಿಯ ಮೇಲೆ ಯೋಗ ಕಲಿಸದಂತೆ ಒತ್ತಡ ಹೇರಲಾಗಿದ್ದು, ಇದನ್ನು ಪಾಲಿಸದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

ರಾಂಚಿಯ ಡೊರಾಂದ ಪ್ರಾಂತ್ಯದಲ್ಲಿ ಆಸಕ್ತರಿಗೆ ಯೋಗ ಕಲಿಸುತ್ತ ಜೀವನ ನಿರ್ವಹಣೆ ಮಾಡುತ್ತಿರುವ ರಫಿಯಾ ನಾಜ್ ಗೆ ಮುಸ್ಲಿಂ ಸಮುದಾಯದ ಕೆಲವರು ಬೆದರಿಕೆ ಒಡ್ಡಿದ್ದಾರೆನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಇದೀಗ ರಫಿಯಾ ನಾಜ್ ಗೆ ಪೊಲೀಸ್ ರಕ್ಷಣೆ ನೀಡಲಾಗಿದೆ.

ಸ್ಥಳೀಯ ಕಾಲೇಜ್ ನಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿರುವ ರಫಿಯಾ ನಾಜ್, ಹಲವು ವರ್ಷಗಳಿಂದ ಯೋಗ ಕಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಖ್ಯಾತ ಯೋಗ ಗುರು ಬಾಬಾ ರಾಮ್ದೇವ್ ಜೊತೆ ರಫಿಯಾ ನಾಜ್ ವೇದಿಕೆ ಹಂಚಿಕೊಂಡಿದ್ದು, ಆ ಬಳಿಕ ಯೋಗ ಕಲಿಸದಂತೆ ಆಕೆಯ ಮೇಲೆ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...