alex Certify
ಕನ್ನಡ ದುನಿಯಾ       Mobile App
       

Kannada Duniya

ಪಬ್ ಗಳಲ್ಲಿ ಇನ್ಮುಂದೆ ಬಂದ್ ಆಗಲಿದೆ ರೆಕಾರ್ಡ್ ಮ್ಯೂಸಿಕ್

ದೆಹಲಿಯ ಆಮ್ ಆದ್ಮಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಬಾರ್ ಮತ್ತು ಪಬ್ ಗಳಲ್ಲಿ ಇನ್ಮುಂದೆ ರೆಕಾರ್ಡ್ ಮ್ಯೂಸಿಕ್ ಹಾಕಬಾರದು ಅಂತಾ ತಿಳಿಸಿದೆ. ಅನೇಕ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಬಾರ್ ಗಳಲ್ಲಿ ಲೈವ್ ಮ್ಯೂಸಿಕ್ ಮತ್ತು ಬ್ಯಾಂಡ್ ಸಂಗೀತವನ್ನು ಮಾತ್ರ ನಡೆಸಲು ಅವಕಾಶ ನೀಡಿದೆ.

ದೆಹಲಿಯ ಐಶಾರಾಮಿ ಖಾನ್ ಮಾರ್ಕೆಟ್, ಡಿಫೆನ್ಸ್ ಕಾಲೋನಿ ಮತ್ತು ಪಶ್ಚಿಮ ದೆಹಲಿಯ ರಚೌರಿ ಗಾರ್ಡನ್ ನಿವಾಸಿಗಳಿಂದ ಅಬಕಾರಿ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಆದೇಶ ರಾಷ್ಟ್ರ ರಾಜಧಾನಿಯ ನೂರಕ್ಕೂ ಹೆಚ್ಚು ಪಬ್ ಗಳ ಮೇಲೆ ಪ್ರಭಾವ ಬೀರಲಿದೆ.

ಎಲ್- 17 ಪರವಾನಗಿ ಪ್ರಕಾರ ಆಹಾರ ಮತ್ತು ಆಲ್ಕೋಹಾಲ್ ಸೇವೆ ಒದಗಿಸುವ ರೆಸ್ಟೋರೆಂಟ್ ಗಳಲ್ಲಿ, ಲೈವ್ ಆಗಿ ಹಾಡುವ ಮತ್ತು ಸಂಗೀತ ಉಪಕರಣಗಳನ್ನು ತಮ್ಮ ಆವರಣದಲ್ಲಿ ಬಳಸಲು ಅನುಮತಿ ನೀಡಲಾಗಿದೆ ಎಂದು ದೆಹಲಿಯ ಅಬಕಾರಿ ಆಯುಕ್ತ ಅಮ್ಜದ್ ತಕ್ ತಿಳಿಸಿದ್ದಾರೆ.

ಹಾಗಂತ ಇದಕ್ಕಾಗಿ ಪ್ರತ್ಯೇಕ ಲೈಸೆನ್ಸ್ ಇಲ್ಲ. ಎಲ್ -17 ಪರವಾನಗಿಯಲ್ಲೇ, ಮದ್ಯ ಪೂರೈಸುವ ರೆಸ್ಟೋರೆಂಟ್ ಮತ್ತು ಪಬ್ ಗಳು ಈ ನಿಯಮಗಳನ್ನು ಅನುಸರಿಸಬೇಕಿದೆ. ಈ ನಿಯಮಗಳನ್ನು ಅನುಸರಿಸದ ಪಬ್ ಮತ್ತು ರೆಸ್ಟೋರೆಂಟ್ ಗಳಿಗೆ ದಂಡ ವಿಧಿಸಲಾಗುವುದು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ನಿಯಮಗಳನ್ನು ಪಾಲಿಸುತ್ತಿವೆಯೋ ಇಲ್ಲವೋ ಎಂದು ಗಮನಿಸಲು ಅಧಿಕಾರಿಗಳು, ಪಬ್ ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...