alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಬುದ್ಧಿ ಕಲಿತ ಸರ್ಕಾರ : ಸ್ಟರ್ಲೈಟ್ ಘಟಕ ಬಂದ್ ಗೆ ಆದೇಶ

13 ಸಾವಿನ ನಂತ್ರ ತಮಿಳುನಾಡು ಸರ್ಕಾರಕ್ಕೆ ಕೊನೆಗೂ ಬುದ್ಧಿ ಬಂದಿದೆ. ತೂತುಕುಡಿಯ ಸ್ಟರ್ಲೈಟ್ ಘಟಕ ಬಂದ್ ಮಾಡಲು ಆದೇಶ ನೀಡಿದೆ. ಸ್ಟರ್ಲೈಟ್ ಘಟಕ ಬಂದ್ ಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ತಾಳಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಘಟನೆಯಲ್ಲಿ 13 ಮಂದಿ ಬಲಿಯಾಗಿದ್ದರು.

ಘಟನೆ ನಂತ್ರ ಸ್ಥಳದಲ್ಲಿ 144 ಸೆಕ್ಷನ್ ಜಾರಿಯಲ್ಲಿತ್ತು. ಇಂಟರ್ನೆಟ್ ಸೇವೆ ಬಂದ್ ಆಗಿತ್ತು. ಸ್ಟರ್ಲೈಟ್ ತಾಮ್ರ ಮಿಶ್ರಣ ಘಟಕದಿಂದ ಅಂತರ್ಜಲ ಕೂಡ ಕಲುಷಿತಗೊಂಡಿತ್ತು. ಪ್ರದೇಶದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಮಾಲಿನ್ಯ ನೀರಿನಿಂದಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಘಟಕವನ್ನು ವಿಸ್ತರಿಸುವುದಾಗಿ ಕಂಪನಿ ಹೇಳಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಅನೇಕ ದಿನಗಳಿಂದ ನಡೆಯುತ್ತಿದ್ದ ಹೋರಾಟ ಹಿಂಸಾರೂಪ ಪಡೆದು ಸಾವು-ನೋವುಗಳಾಗಿದ್ದವು. ಸರ್ಕಾರ ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿ ನೀಡಿದೆ. ಆದ್ರೆ ಸರ್ಕಾರದ ಆದೇಶ ಪ್ರಶ್ನಿಸಿ ಕಂಪನಿ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...