alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಬೀದಿ ನಾಯಿ ಹಿಡಿದು ತಂದ್ರೆ 850 ರೂಪಾಯಿ

ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗ್ತಿದೆ. ಇದ್ರ ನಿಯಂತ್ರಣಕ್ಕೆ ಪುರಸಭೆ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ. ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವ ಜವಾಬ್ದಾರಿಯನ್ನು ಒಂದು ಎನ್ ಜಿ ಓಗೆ ನೀಡಲಾಗಿದೆ. ಎನ್ ಜಿ ಓ ಕೆಲಸಗಾರರು ಇಡೀ ದಿನ ಬೀದಿ ಬೀದಿ ಸುತ್ತಿ ನಾಯಿಗಳನ್ನು ಹಿಡಿಯುತ್ತಿದ್ದಾರೆ.

ಪ್ರತಿದಿನ ಸುಮಾರು 20-25 ನಾಯಿಗಳನ್ನು ಹಿಡಿದು ತರಲಾಗುತ್ತದೆಯಂತೆ. ಬೆಳಿಗ್ಗೆ ನಾಯಿ ಹಿಡಿದ್ರೆ ಸಂಜೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಎನ್ ಜಿ ಓ ಸಿಬ್ಬಂದಿ ಜೊತೆ ಪ್ರಾಣಿ ವೈದ್ಯರ ತಂಡವೊಂದಿರುತ್ತದೆ. 5 ಸಾವಿರ ನಾಯಿಗಳಿಗೆ ಚಿಕಿತ್ಸೆ ಮಾಡುವಂತೆ ನಗರ ಸಭೆ ಸೂಚನೆ ನೀಡಿದೆ. ಈವರೆಗೆ ಎನ್ ಜಿ ಒ 2 ಸಾವಿರ ನಾಯಿಗಳನ್ನು ಹಿಡಿದಿದೆಯಂತೆ.

ಒಂದು ನಾಯಿ ಸಂತಾನಹರಣ ಚಿಕಿತ್ಸೆಗೆ 850 ರೂಪಾಯಿ ನೀಡಲಾಗುತ್ತದೆಯಂತೆ. ಈ ಕಾರ್ಯಾಚರಣೆ ನಂತ್ರ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆದ್ರೆ 5 ಸಾವಿರ ನಾಯಿಗಳು ಸಿಗುವವರೆಗೂ ಈ ಅಭಿಯಾನ ಮುಂದುವರೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...