alex Certify
ಕನ್ನಡ ದುನಿಯಾ       Mobile App
       

Kannada Duniya

ಚೀಲದಲ್ಲಿ ತುಂಬಿ ಮಗಳಿಗೆ ಹೊಡೆದ್ಲು ಮಲತಾಯಿ

ಐದು ವರ್ಷದ ಬಾಲಕಿಗೆ ಆಕೆ ಮಲತಾಯಿ ಬ್ಯಾಗ್ ನಲ್ಲಿ ತುಂಬಿ ಒದೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ  ಮಲತಾಯಿ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಚಂಡೀಗಢದ ಸೆಕ್ಟರ್ 29ರಲ್ಲಿ ಈ ಘಟನೆ ನಡೆದಿದೆ. ಮನಮೋಹನ್ ಸಿಂಗ್ ಗೆ ಇಬ್ಬರು ಮಕ್ಕಳು. 2016ರಲ್ಲಿ ಆತನ ಮೊದಲ ಪತ್ನಿ ಸಾವನ್ನಪ್ಪಿದ್ದಳಂತೆ. ನಂತ್ರ ಇನ್ನೊಂದು ಮದುವೆಯಾಗಿದ್ದನಂತೆ. ಆದ್ರೆ ಎರಡನೇ ಪತ್ನಿ ಜಸ್ಪ್ರೀತ್ ಮೊದಲ ಪತ್ನಿ ಮಗಳಿಗೆ ಪ್ರತಿದಿನ ಹಿಂಸೆ ನೀಡುತ್ತಾಳಂತೆ.

ಕೆಲ ದಿನಗಳ ಹಿಂದೆ ಮಲತಾಯಿ ಹೊಡೆಯುವ ವಿಷ್ಯವನ್ನು ಮಗ ಹೇಳಿದ್ದನಂತೆ. ಆದ್ರೆ ಮನಮೋಹನ್ ನಂಬಿರಲಿಲ್ಲವಂತೆ. ನಂತ್ರ ತಾಯಿ ಹೊಡೆಯುವ ವಿಡಿಯೋ ಮಾಡಿದ್ದಾನೆ ಮಗ. ಮಲತಾಯಿ ಐದು ವರ್ಷದ ಮಗಳಿಗೆ ಚೀಲದಲ್ಲಿ ತುಂಬಿ ಹೊಡೆಯುತ್ತಿದ್ದಾಳೆ. ಇನ್ನೊಂದು ವಿಡಿಯೋದಲ್ಲಿ ಹಾಸಿಗೆ ಮೇಲೆ ಕುಳಿತುಕೊಂಡು ಕಪಾಳಮೋಕ್ಷ ಮಾಡ್ತಿದ್ದಾಳೆ. ಅದನ್ನು ನೋಡಿದ ತಂದೆ ಪೊಲೀಸ್ ಠಾಣೆಯಲ್ಲಿ ಎರಡನೇ ಪತ್ನಿ ವಿರುದ್ಧ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...