alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿಗೆ ಬರುವ ಮೊದಲು ಪತ್ನಿ ಕಾಲು ಒತ್ತಿ ಬರಬೇಕು ಸರ್…!

”ಸರ್..! ಕಚೇರಿಗೆ ಬರುವ ಮೊದಲು ಪತ್ನಿ ಕಾಲು ಒತ್ತಬೇಕು. ಪ್ರತಿಯೊಂದು ಮನೆ ಕೆಲಸ ಮಾಡಬೇಕು. ಮಕ್ಕಳನ್ನು ಸಿದ್ಧಪಡಿಸಬೇಕು. ಬಟ್ಟೆ ತೊಳೆಯಬೇಕು. ಇದೆಲ್ಲ ಮಾಡಿದ ನಂತ್ರ ಕಚೇರಿಗೆ ಬರಬೇಕು. ಅದಕ್ಕಾಗಿಯೇ ಕಚೇರಿಗೆ ಬರುವುದು ತಡವಾಗುತ್ತಿದೆ. ಇನ್ಮುಂದೆ ಹಾಗಾಗುವುದಲ್ಲ’’. ಹೀಗಂತ ಸಿಬ್ಬಂದಿ ಬರೆದ ಪತ್ರ ಆಶ್ಚರ್ಯ ಹುಟ್ಟಿಸಿದೆ.

ವಾಣಿಜ್ಯ ತೆರಿಗೆ ಚಿತ್ರಕೂಟ ಕಚೇರಿಯಲ್ಲಿ ಪೋಸ್ಟ್ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡ್ತಿರುವ ಅಶೋಕ್ ಕುಮಾರ್ ಸದಾ ಕಚೇರಿಗೆ ತಡವಾಗಿ ಬರ್ತಿದ್ದರು. ಆಗಸ್ಟ್ 18ರಂದು ನೋಟೀಸ್ ನೀಡಲಾಗಿತ್ತು. ನೊಟೀಸ್ ಗೆ ಉತ್ತರ ನೀಡದೆ ಹೋದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವ್ರು ಹೇಳಿದ್ದರು. ಇದಕ್ಕೆ ಅಶೋಕ್ ಕುಮಾರ್ ಈ ರೀತಿ ಉತ್ತರ ನೀಡಿದ್ದಾರೆ.

ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ನನಗೆ ಮೂರು ಮಕ್ಕಳು. ಮನೆ ಕೆಲಸ ಮುಗಿಸಿ ರೊಟ್ಟಿ ಮಾಡಲು ಹೋದ್ರೆ ರೊಟ್ಟಿ ಇಲ್ಲವೆ ಸಾಂಬಾರ್ ಸರಿಯಾಗಿ ಆಗೋದಿಲ್ಲ. ರುಚಿಯಿಲ್ಲದ ಆಹಾರ ತಿನ್ನುತ್ತಿದ್ದೇವೆ. ಎಲ್ಲ ಕೆಲಸ ಮುಗಿಸಿ ಬಂದ್ರೆ ಹೊಂಡ-ಗುಂಡಿ ರಸ್ತೆಯಲ್ಲಿ, ಟ್ರಾಫಿಕ್ ಜಾಮ್ ನಲ್ಲಿ ಕಚೇರಿಗೆ ಬರೋದು ತಡವಾಗುತ್ತದೆ ಎಂದು ನೋಟೀಸ್ ಗೆ ಉತ್ತರ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...