alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಪ್ರಿಯರಿಗೆ, ಬಾರ್ ಮಾಲೀಕರಿಗೆ ಸಿಹಿಸುದ್ದಿ

bar-ddd

ನವದೆಹಲಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬಂದ್ ಆಗಿರುವ ಬಾರ್ ಗಳ ಮಾಲೀಕರಿಗೆ ಸಿಹಿ ಸುದ್ದಿ ಇಲ್ಲಿದೆ.

ನಗರದೊಳಗೆ ಹಾದುಹೋಗಿರುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಗಳನ್ನು ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಅದರಂತೆ ಜುಲೈ 30 ರ ಮಧ್ಯರಾತ್ರಿಯಿಂದಲೇ ಹೆದ್ದಾರಿ ಬಾರ್ ಗಳು ಬಂದ್ ಆಗಿವೆ.

ನಗರದೊಳಗೆ ಹಾದುಹೋಗಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಿಗೆ ಈ ನಿಯಮ ಅನ್ವಯಿಸದಂತೆ ಮಾಡಲು ಹಲವು ರಾಜ್ಯ ಸರ್ಕಾರಗಳು ಡಿನೋಟಿಫೈ ಮಾಡಲು ಮುಂದಾಗಿವೆ.

ಈ ಕುರಿತಾಗಿ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಮನವಿ ಮಾಡಿವೆ. ಚಂಡೀಗಡದಲ್ಲಿ ಹೆದ್ದಾರಿಗಳನ್ನು ಸರ್ಕಾರ ಡಿನೋಟಿಫೈ ಮಾಡಿ ಬಾರ್ ಗಳನ್ನು ಮುಂದುವರೆಸಲು ಲೈಸೆನ್ಸ್ ನವೀಕರಿಸಿದೆ.

ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಎನ್.ಜಿ.ಒ. ಒಂದು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಗರದೊಳಗೆ ಹಾದುಹೋಗಿರುವ ಹೆದ್ದಾರಿಗಳಿಗೆ ಈ ನಿಯಮ ಅನ್ವಯಿಸಲ್ಲ ಎಂದು ಹೇಳಿದೆ.

500 ಮೀಟರ್ ವ್ಯಾಪ್ತಿಯ ನಿಯಮ ನಗರದ ಬಾರ್ ಗಳಿಗೆ ಅನ್ವಯಿಸಲ್ಲ. ಸೂಕ್ತ ಕಾರಣಗಳನ್ನು ನೀಡಿ, ಕಾನೂನಿನ ಅಡಿ  ಹೆದ್ದಾರಿಗಳನ್ನು ಡಿನೋಟಿಫೈ ಮಾಡಬಹುದಾಗಿದೆ ಎಂದು ತಿಳಿಸಿದೆ.

ಇದರಿಂದಾಗಿ ಈಗಾಗಲೇ ಬಂದ್ ಆಗಿರುವ ಹೆದ್ದಾರಿಯ ಬಾರ್ ಗಳು ಮತ್ತೆ ಬಾಗಿಲು ತೆಗೆಯುವ ಸಾಧ್ಯತೆ ಇದೆ.

ಹೆದ್ದಾರಿ ಬಾರ್ ಬಂದ್ ಆಗಿದ್ದರಿಂದ ಬೇರೆ ಕಡೆಗಳಲ್ಲಿರುವ ಬಾರ್ ಗಳಿಗೆ ಭಾರೀ ಬೇಡಿಕೆ ಬಂದಿದ್ದು, ನೂಕು ನುಗ್ಗಲು ಉಂಟಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...