alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗೆ ಹಾಜರಾಗದೆ ಸಂಬಳ ಪಡೆಯುತ್ತಿದ್ದಾರೆ ಶೇ.50 ಶಿಕ್ಷಕರು !

Teacher 3344ಶಿಕ್ಷಣಕ್ಕೆ ಒತ್ತು ನೀಡಲು ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಆದರೆ ಮಧ್ಯ ಪ್ರದೇಶದಲ್ಲಿ ಶಾಕಿಂಗ್ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಶೇ. 50 ಮಂದಿ ಶಿಕ್ಷಕರು ಶಾಲೆಗೆ ಹಾಜರಾಗದೆ ಸಂಬಳ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮಧ್ಯ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಆರ್. ಮೊಹಂತಿಯವರೇ ಈ ಮಾಹಿತಿ ನೀಡಿದ್ದು, ಕೆಲವು ಶಿಕ್ಷಕರು ತಮ್ಮ ಬದಲಿಗೆ ಬೇರೊಬ್ಬರನ್ನು ಪಾಠ ಮಾಡಲು ನೇಮಿಸಿಕೊಂಡು ಅವರಿಗೆ 5000 ರೂ. ವೇತನ ಪಾವತಿಸುತ್ತಿರುವ ಸಂಗತಿಯೂ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಶಿಕ್ಷಕರುಗಳು ಸಂಬಳದ ದಿನದಂದು ಮಾತ್ರ ಶಾಲೆಗೆ ಹಾಜರಾಗುತ್ತಾರೆಂದು ಮೊಹಂತಿ ತಿಳಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ ಒಟ್ಟು 20,000 ಶಾಲೆಗಳಿದ್ದು, ಇದರಲ್ಲಿ 4.5 ಲಕ್ಷ ಮಂದಿ ಶಿಕ್ಷಕರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಈ ಪೈಕಿ ಶೇ. 50 ಕ್ಕೂ ಅಧಿಕ ಶಿಕ್ಷಕರು ಗೈರು ಹಾಜರಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವ ಸರ್ಕಾರ, ಗೈರು ಹಾಜರಾದ ಶಿಕ್ಷಕರ ವೇತನ ಕಡಿತ, ಅಮಾನತು ಸೇರಿದಂತೆ ಮೊದಲಾದ ಕಠಿಣ ಕ್ರಮಕ್ಕೆ ಸಿದ್ದತೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...