alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡನೋಡುತ್ತಿದ್ದಂತೆಯೇ ಕಾಣೆಯಾಯ್ತು 43 ಲಕ್ಷ ರೂ.

atm

ಮಧ್ಯಪ್ರದೇಶದ ಭೋಪಾಲದಲ್ಲಿ ಎಟಿಎಂ ವಾಹನದಲ್ಲಿದ್ದ 43 ಲಕ್ಷ ರೂಪಾಯಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಎಂಪಿ ನಗರದಲ್ಲಿ ಹಾಡಹಗಲೇ ಈ ಕೃತ್ಯ ನಡೆದಿದೆ. ಮೂವರು ಖದೀಮರು ಜೊತೆಯಾಗಿ ಈ ಕೆಲಸ ಮಾಡಿದ್ದಾರೆ. ಎಲ್ಲರೂ 30-40 ವರ್ಷದೊಳಗಿನವರು.

ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ತುಂಬಿಸಲು ಹಣ ತರಲಾಗಿತ್ತು. ಎಟಿಎಂ ಹೊರಭಾಗದಲ್ಲಿ ವಾಹನ ನಿಂತಿತ್ತು. ಅದೊಂದು ಜನನಿಬಿಡ ಸ್ಥಳ. ಅದರ ನಡುವೆಯೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬ್ಯಾಂಕ್ ನ ಇಬ್ಬರು ಸಿಬ್ಬಂದಿ ಎಟಿಎಂನ ಒಳಹೊಕ್ಕಿದ್ರು.

ಸೆಕ್ಯೂರಿಟಿ ಗಾರ್ಡ್ ಕೂಡ ವಾಹನದ ಬಳಿಯೇ ಇದ್ದ. ಚಾಲಕ ವಾಹನದ ಒಳಗೇ ಕುಳಿತಿದ್ದ. 10 ಮತ್ತು 500 ರ ನೋಟುಗಳಿದ್ದ ಬಾಕ್ಸನ್ನು ನೆಲದ ಮೇಲಿಡಲಾಗಿತ್ತು. ವಾಹನದೊಳಗಿದ್ದ ಹಣದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.

ಅದನ್ನೇ ಗಮನಿಸ್ತಿದ್ದ ಚಾಲಾಕಿ ಕಳ್ಳರು ವಾಹನದ ಬಾಗಿಲು ತೆಗೆದು 43 ಲಕ್ಷ ರೂಪಾಯಿ ಹಣವಿದ್ದ ಬಾಕ್ಸ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಸಿಸಿ ಟಿವಿಯಲ್ಲಿ ಈ ಚಾಲಾಕಿ ಕಳ್ಳತನದ ದೃಶ್ಯ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...