alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರ್ಚ್ ತ್ರೈಮಾಸಿಕಕ್ಕೆ ಎಸ್ ಬಿ ಐ ಗೆ 7718 ಕೋಟಿ ರೂ. ನಷ್ಟ

2018 ರ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರೀ ನಷ್ಟ ಅನುಭವಿಸಿದೆ. ಬ್ಯಾಂಕ್ ಗೆ 7718 ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2017ರ ನಾಲ್ಕನೇ ತ್ರೈಮಾಸಿಕದಲ್ಲಿಯೂ ಬ್ಯಾಂಕ್ ಗೆ 3442 ಕೋಟಿ ರೂಪಾಯಿ ನಷ್ಟವುಂಟಾಗಿತ್ತು.

ವಿತ್ತ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಬಡ್ಡಿ ಆದಾಯ ಶೇಕಡಾ 5.2 ರಷ್ಟು ಇಳಿದಿದ್ದು, 19,974 ಕೋಟಿ ರೂಪಾಯಿಯಾಗಿದೆ. 2017ರಲ್ಲಿ ಬಡ್ಡಿ ಆದಾಯ 21,065 ಕೋಟಿ ರೂಪಾಯಿಯಿತ್ತು. ಎಸ್ ಬಿ ಐ ನಷ್ಟದ ವರದಿ ನೀಡ್ತಿದ್ದಂತೆ ಷೇರುಗಳಲ್ಲಿ ಶೇಕಡಾ 5 ರಷ್ಟು ಏರಿಕೆಯಾಗಿ ಷೇರು ದರ 256ಕ್ಕೆ ಬಂದು ನಿಂತಿದೆ.

ಕ್ವಾರ್ಟರ್ ಆಧಾರದ ಮೇಲೆ ನಾಲ್ಕನೇ ತ್ರೈಮಾಸಿಕದಲ್ಲಿ ಎಸ್ ಬಿ ಐ ಒಟ್ಟು ಎನ್ಪಿಎ ಶೇಕಡಾ 10.35 ರ ಬದಲು ಶೇಕಡಾ 10.91ಕ್ಕೆ ಏರಿಕೆಯಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಎಸ್ ಬಿ ಐ ನ ನಿವ್ವಳ ಎನ್ಪಿಎ ಶೇಕಡಾ 5.61ರಿಂದ 5.73ಕ್ಕೆ ಏರಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...