alex Certify
ಕನ್ನಡ ದುನಿಯಾ       Mobile App
       

Kannada Duniya

ವೋಟಿಗಾಗಿ ಸಹೋದರನನ್ನೇ ಮುಗಿಸಿದ RLD ಅಭ್ಯರ್ಥಿ

rld

ಉತ್ತರಪ್ರದೇಶ ಚುನಾವಣಾ ಕಣ ದಿನೇ ದಿನೇ ಕಾವೇರುತ್ತಿದೆ. ವೋಟಿಗಾಗಿ ಅಭ್ಯರ್ಥಿಗಳು ಏನು ಬೇಕಾದ್ರೂ ಮಾಡಲು ಸಿದ್ಧ ಎನ್ನುತ್ತಿದ್ದಾರೆ. ಬುಲಂದ್ ಶಹರ್ ಜಿಲ್ಲೆಯಲ್ಲಿ ಆರ್ ಎಲ್ ಡಿ ಅಭ್ಯರ್ಥಿಯೊಬ್ಬ ಅನುಕಂಪದ ಮತ ಗಿಟ್ಟಿಸಿಕೊಳ್ಳಲು ತನ್ನ ಸಹೋದರನನ್ನೇ ಹತ್ಯೆ ಮಾಡಿಸಿದ್ದಾನೆ.

ಖುರ್ಜಾ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಆರ್ ಎಲ್ ಡಿ ಉಮೇದುವಾರ ಮನೋಜ್ ಗೌತಮ್ ನ ಅಣ್ಣ ವಿನೋದ್ ಗೌತಮ್ ಹಾಗೂ ಸಚಿನ್  ಶವ ಮಾವಿನ ಮರದ ಮೇಲೆ ಪತ್ತೆಯಾಗಿದೆ. ಆರ್ ಎಲ್ ಡಿ ಮುಖಂಡ ಜಯಂತ್ ಚೌಧರಿ ಅವರ ರ್ಯಾಲಿಯಲ್ಲಿ ವಿನೋದ್ ಹಾಗೂ ಸಚಿನ್ ಪಾಲ್ಗೊಂಡಿದ್ದರು.

ಸೋಮವಾರ ರ್ಯಾಲಿ ಮುಕ್ತಾಯವಾಗಿತ್ತು, ಬಳಿಕ ಇಬ್ಬರೂ ನಾಪತ್ತೆಯಾಗಿದ್ದರು. ಮಂಗಳವಾರ ಗುಂಡು ಹೊಕ್ಕಿದ್ದ ಮೃತದೇಹ ಸಿಕ್ಕಿದೆ. ಅವರ ಫೋನ್ ಕರೆಗಳನ್ನು ಪರಿಶೀಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಹತ್ಯೆಯಲ್ಲಿ ಮನೋಜ್ ಕೈವಾಡವಿರುವುದಾಗಿ ಅವರು ಬಾಯ್ಬಿಟ್ಟಿದ್ದಾರೆ. ಸದ್ಯ ಮನೋಜ್ ನನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಳೆದ ಬಾರಿ ಖುರ್ಜಾ ಕ್ಷೇತ್ರದಲ್ಲಿ ಬಿಸ್ಪಿಯಿಂದ ಮನೋಜ್ ಗೆ ಟಿಕೆಟ್ ಸಿಕ್ಕಿತ್ತು, ಆದ್ರೆ ನಂತರ ಅಭ್ಯರ್ಥಿಯನ್ನು ಬದಲಾಯಿಸಿದ ಮಾಯಾವತಿ ಅರ್ಜುನ್ ಸಿಂಗ್ ರನ್ನು ಕಣಕ್ಕಿಳಿಸಿದ್ದರು. ನಂತರ ಮನೋಜ್ ಆರ್ ಎಲ್ ಡಿ ಸೇರಿದ್ದ. ಮನೋಜ್ ಗೌತಮ್ ನ ಕಾರು ಚಾಲಕ ಪ್ರವೀಂದ್ರ, ಫಿರೋಜ್ ಎಂಬಾತನ ಜೊತೆ ಸೇರಿ ಕೊಲೆ ಮಾಡಿದ್ದ. ಹತ್ಯೆಯ ಪ್ಲಾನ್ ಬಗ್ಗೆ ಮನೋಜ್ ಹಾಗೂ ಪ್ರವೀಂದ್ರ ನಡುವಣ ಸಂಭಾಷಣೆಯನ್ನು ಕೂಡ ಪೊಲೀಸರು ಬಿಡುಗಡೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...