alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕು ಇರಿತಕ್ಕೊಳಗಾದವನಿಗೆ ಎಷ್ಟು ಬೇಡಿದ್ರೂ ನೀರು ಕೊಡಲಿಲ್ಲ ಜನ

ದೆಹಲಿಯ ವಿಷ್ಣು ಗಾರ್ಡನ್ ನಲ್ಲಿ ಚಾಕು ಇರಿತಕ್ಕೊಳಗಾಗಿ ಸಾವಿನ ಸನಿಹದಲ್ಲಿದ್ದ ವ್ಯಕ್ತಿಯೊಬ್ಬ ಎಷ್ಟು ಬೇಡಿಕೊಂಡ್ರೂ ಜನರು ಗುಟುಕು ನೀರು ಕೊಡಲು ಮುಂದಾಗಿಲ್ಲ. ಬದಲಾಗಿ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

25 ವರ್ಷದ ಅಕ್ಬರ್ ಅಲಿ ಎಂಬಾತನ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಎರಡು ಚಾಕುವಿನಿಂದ ಆತನಿಗೆ ಮನಬಂದಂತೆ ಇರಿದಿದ್ದರು. ಪಕ್ಕೆಲುಬಿನಲ್ಲಿ ಚುಚ್ಚಿಕೊಂಡಿದ್ದ ಒಂದು ಚಾಕುವನ್ನು ಅಕ್ಬರ್ ಹೊರತೆಗೆದಿದ್ದ. ಇನ್ನೊಂದನ್ನು ತೆಗೆಯಲು ಆತನಿಂದ ಸಾಧ್ಯವಾಗಲಿಲ್ಲ.

ಆತನ ದೇಹ ಸಂಪೂರ್ಣ ರಕ್ತಸಿಕ್ತವಾಗಿತ್ತು. ದಾರಿಹೋಕರು ಆತನ ಬಳಿ ಮನೆಯ ವಿಳಾಸ ಕೇಳಿದ್ದಾರೆ. ಈ ವೇಳೆಗೆ ತನಗೆ ಹನಿ ನೀರು ಕೊಡುವಂತೆ ಅಕ್ಬರ್ ಬೇಡಿಕೊಂಡಿದ್ದಾನೆ. ಆದ್ರೆ ಯಾರೊಬ್ಬರೂ ನೀರು ಕೊಟ್ಟಿಲ್ಲ. ತಮ್ಮ ತಮ್ಮ ಮೊಬೈಲ್ ತೆಗೆದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಕೊನೆಗೆ ಪೊಲೀಸರು ಅಕ್ಬರ್ ನನ್ನು ಆಸ್ಪತ್ರೆಗೆ ದಾಖಲಿಸಿದ್ರು, ಆದ್ರೆ ಸಮಯಕ್ಕೆ ಸರಿಯಾಗಿ ಸಹಾಯ ದೊರಕದೇ ಇದ್ದಿದ್ರಿಂದ ತೀವ್ರ ರಕ್ತಸ್ರಾವವಾಗಿ ಆತ ಮೃತಪಟ್ಟಿದ್ದಾನೆ. ಮೃತ ಅಕ್ಬರ್ ಸ್ಥಳೀಯ ರೌಡಿ ಅಂತಾ ಹೇಳಲಾಗ್ತಿದೆ. ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಅವರಲ್ಲಿ ಓರ್ವನ ಪತ್ನಿ ಜೊತೆಗೆ ಅಕ್ಬರ್ ಗೆ ಅಕ್ರಮ ಸಂಬಂಧವಿತ್ತು, ಅದೇ ಕೋಪದಲ್ಲಿ ಕೊಲೆ ಮಾಡಿರಬಹುದು ಅಂತಾ ಆತನ ಸಹೋದರ ಹೇಳಿದ್ದಾನೆ. ಘಟನೆ ನಡೆದಾಗ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಮಹಿಳೆಯೊಬ್ಬಳು ಅಕ್ಬರ್ ನೆರವಿಗೆ ಬಂದಿದ್ದಳು. ಆಕೆಗೂ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...