alex Certify
ಕನ್ನಡ ದುನಿಯಾ       Mobile App
       

Kannada Duniya

ತಪ್ಪು ಮಾಹಿತಿ ಶೇರ್ ಮಾಡಿ ಟ್ರೋಲ್ ಗೆ ತುತ್ತಾದ ಸಚಿವೆ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೊಂದು ಮಾಹಿತಿ ಹಂಚಿಕೊಳ್ಳುವ ವೇಳೆ ಆ ಕುರಿತು ಸ್ಪಷ್ಟತೆ ಇರಬೇಕಾಗುತ್ತದೆ. ಅದರಲ್ಲೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ವಿಷಯಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಇಂತ ತಪ್ಪುಗಳ ಕುರಿತು ಸದಾ ಗಮನ ನೀಡುವ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸುತ್ತಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಈಗ ಅಂತಹುದೇ ಯಡವಟ್ಟೊಂದನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ತುತ್ತಾಗಿದ್ದಾರೆ. ಜಮ್ಮು ಕಾಶ್ಮೀರದ ಜೋಜಿಲ್ಲಾ ಪಾಸ್ ಟನಲ್ ಪ್ರಾಜೆಕ್ಟ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡ ಸ್ಮೃತಿ ಇರಾನಿ, ಶ್ರೀನಗರದಿಂದ ಲೇಹ್ ಗೆ 15 ನಿಮಿಷ ಎಂದು ಹೇಳಿದ್ದಾರೆ.

ಆದರೆ ಶ್ರೀನಗರದಿಂದ ಲೇಹ್ ಗೆ 412 ಕಿ.ಮೀ. ಗಳಾಗಿದ್ದು, ಸ್ಮೃತಿ ಇರಾನಿಯವರ ಟ್ವೀಟ್ ಗೆ ಅಣಕವಾಡಿರುವ ಜಾಲತಾಣಿಗರು, ಶ್ರೀನಗರದಿಂದ ಲೇಹ್ ಗೆ ವಾಯು ಮಾರ್ಗದ ಮೂಲಕ ಹೋದರೇ 256 ಕಿ.ಮೀ. ಗಳಾಗುತ್ತದೆ. ಇದನ್ನು ಕ್ರಮಿಸಲು ಗಂಟೆಗೆ 1024 ಕಿ.ಮೀ. ವೇಗದಲ್ಲಿ ಹೋಗಬೇಕಾಗುತ್ತದೆ ಎಂದಿದ್ದಾರೆ. ಮತ್ತೊಬ್ಬರು ಪುನಃ ಶಿಕ್ಷಣ ಪಡೆದು ಬನ್ನಿ ಎಂದು ಸಲಹೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಶೇರ್ ಮಾಡುವ ಮುನ್ನ ಯೋಚಿಸಬೇಕಿತ್ತು ಎಂದು ಹಲವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...