alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀನಗರ ಉಪಚುನಾವಣೆ : ಫಾರೂಖ್ ಅಬ್ದುಲ್ಲಾಗೆ ನಿರಾಯಾಸ ಗೆಲುವು

farooq-abdullah-omar-pti_650x400_71492229810

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫಾರೂಖ್ ಅಬ್ದುಲ್ಲಾ ಶ್ರೀನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆಡಳಿತಾರೂಢ ಪಿಡಿಪಿ ಅಭ್ಯರ್ಥಿ ನಜೀರ್ ಅಹ್ಮದ್ ಖಾನ್ ರನ್ನು 10,700 ಮತಗಳಿಂದ ಪರಾಭವಗೊಳಿಸಿದ್ದಾರೆ.

ಫಾರೂಖ್ ಅಬ್ದುಲ್ಲಾ 48,554 ಮತಗಳನ್ನು ಪಡೆದಿದ್ರೆ, ನಜೀರ್ ಅಹ್ಮದ್ ಖಾನ್ 37,779 ಮತಗಳನ್ನು ಪಡೆದಿದ್ದಾರೆ. ಕಳೆದವಾರ ಶ್ರೀನಗರ ಸಂಸದೀಯ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಶೇ.7ರಷ್ಟು ಮತದಾನವೂ ಆಗಿತ್ತು, ಆದ್ರೆ ತೀವ್ರ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಮರುಮತದಾನ ನಡೆಸಲಾಗಿತ್ತು.

ಮರುಮತದಾನದಲ್ಲಿ ಅತ್ಯಂತ ಕಡಿಮೆ ಅಂದ್ರೆ ಶೇ.2ರಷ್ಟು ಮತದಾರರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದರು. 9 ಅಭ್ಯರ್ಥಿಗಳು ಈ ಕ್ಷೇತ್ರದಿಂದ ಕಣಕ್ಕಿಳಿದಿದ್ರು. ಆದ್ರೆ ಫಾರೂಖ್ ಅಬ್ದುಲ್ಲಾ ಹಾಗೂ ನಜೀರ್ ಖಾನ್ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.

2014ರಲ್ಲಿ ಶ್ರೀನಗರ ಸಂಸದರಾಗಿ ಆಯ್ಕೆಯಾಗಿದ್ದ ತಾರೀಖ್ ಹಮೀದ್ ಖರ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರಿಂದ ಉಪಚುನಾವಣೆ ನಡೆದಿದೆ. ಮೂರನೇ ಬಾರಿಗೆ ಫಾರೂಖ್ ಅಬ್ದುಲ್ಲಾ ಸಂಸದರಾಗಿ ಆಯ್ಕೆಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...