alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಹೆಸರಲ್ಲಿ ಕಾಮಪ್ರಚೋದಕ ಪ್ರೊಫೈಲ್..!

ahmdbd

ಅಹಮದಾಬಾದ್: ಇಬ್ಬರು ಮಕ್ಕಳ ತಂದೆಯೊಬ್ಬ, ಪ್ರೀತಿಸಲು ನಿರಾಕರಿಸಿದ ಯುವತಿಯ ಫೋಟೋ ಬಳಸಿಕೊಂಡು ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಠಿಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಅಹಮದಾಬಾದ್ ನ ಅಸರ್ವಾದ ಭಕ್ತಿ ಫ್ಲ್ಯಾಟ್ ನಲ್ಲಿ ವಾಸವಾಗಿರುವ 36 ವರ್ಷದ ನೀಲೇಶ್ ಪಟೇಲ್(36) ಇಂತಹ ಕೃತ್ಯ ಎಸಗಿದ ಆರೋಪಿ.

ನೆರೆಮನೆಯ 22 ವರ್ಷದ ಯುವತಿಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ನೀಲೇಶ್ ಆಕೆ ಪ್ರೀತಿಗೆ ಒಪ್ಪದಿದ್ದಾಗ, ಇಂತಹ ಕೃತ್ಯ ಎಸಗಿದ್ದಾನೆ.

ಆಕೆಯ ಹೆಸರಲ್ಲಿ ನಕಲಿ ಪ್ರೊಫೈಲ್ ಸೃಷ್ಠಿಸಿ, ಆಕೆಯ ಫೋಟೋ ಜೊತೆಗೆ ಕಾಮಪ್ರಚೋದಕ ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾನೆ. ಯುವತಿಗೆ ಅಪರಿಚಿತರಿಂದ ಕರೆಗಳು ಬರಲಾರಂಭಿಸಿದ್ದು, ಆಕೆ ಪೋಷಕರಿಗೆ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಸಲಿ ವಿಷಯ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...