alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರನ್ನು ಕಟ್ಟಿಹಾಕಿ ವಿಮಾನ ಸಿಬ್ಬಂದಿ ಮಾಡಿದ್ದಾರೆ ಈ ಕೆಲಸ

spicejet_759

ಸ್ಪೈಸ್ ಜೆಟ್ ವಿಮಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವಿಮಾನ ಭೂಸ್ಪರ್ಷ ಮಾಡುವ ಕೆಲವೇ ನಿಮಿಷಗಳ ಮುನ್ನ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳುವಂತೆ ಸೂಚಿಸಿದ ಸಿಬ್ಬಂದಿ ರಾಷ್ಟ್ರಗೀತೆ ಪ್ರಸಾರ ಮಾಡಿದ್ದಾರೆ. ಹಾಗಾಗಿ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸಲು ಪ್ರಯಾಣಿಕರಿಗೆ ಸಾಧ್ಯವಾಗಿಲ್ಲ.

ಈ ಬಗ್ಗೆ ಪ್ರಯಾಣಿಕರೊಬ್ಬರು ದೂರು ನೀಡಿದ್ದಾರೆ. ಎಪ್ರಿಲ್ 18ರಂದು ತಿರುಪತಿಯಿಂದ ಹೈದ್ರಾಬಾದ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ SG1044 ವಿಮಾನದಲ್ಲಿ ನಡೆದ ಘಟನೆ ಇದು. ಪೈಲಟ್ ಆದೇಶದಂತೆ ಪ್ರಯಾಣಿಕರೆಲ್ಲ ಸೀಟ್ ಬೆಲ್ಟ್ ಧರಿಸಿ ಕುಳಿತಿದ್ರು.

ಈ ಸಂದರ್ಭದಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡಲಾಗಿದೆ. ಸಿಬ್ಬಂದಿಯೊಬ್ಬ ರಾಷ್ಟ್ರಗೀತೆ ಪ್ರಸಾರದ ನಡುವೆಯೇ ಮ್ಯೂಸಿಕ್ ಸಿಸ್ಟಮ್ ಕೂಡ ಆನ್ ಮಾಡಿದ್ದನಂತೆ. ವಿಮಾನದ ಸಿಬ್ಬಂದಿ ಮಾಡಿದ ಯಡವಟ್ಟನ್ನು ಪುನೀತ್ ತಿವಾರಿ ಎಂಬ ಪ್ರಯಾಣಿಕ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ನಂತರ ಸ್ಪೈಸ್ ಜೆಟ್ ವಿರುದ್ಧ ದೂರು ನೀಡಿದ್ದಾರೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...