alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಆಫರ್ ನೊಂದಿಗೆ ಮತ್ತೆ ಬಂದ ಸ್ಪೈಸ್ ಜೆಟ್

104365-spicejet7

ಮಕ್ಕಳ ಪರೀಕ್ಷೆ ಮುಗಿದ ನಂತರ ಎಲ್ಲಿಗೆ ಹೋಗೋದು ಅಂತಾ ಪ್ಲಾನ್ ಮಾಡ್ತಾ ಇರುವವರಿಗೊಂದು ಖುಷಿ ಸುದ್ದಿ. ವಿಮಾನದಲ್ಲಿ ಕಡಿಮೆ ಬೆಲೆಗೆ ಪ್ರಯಾಣ ಮಾಡುವ ಅವಕಾಶ ಮತ್ತೊಮ್ಮೆ ಒದಗಿ ಬಂದಿದೆ. ಪ್ರಯಾಣಿಕರ ಅಗ್ಗದ ವಿಮಾನ ಸ್ಪೈಸ್ ಜೆಟ್ ಮತ್ತೆ ಪ್ರಯಾಣಿಕರಿಗೆ ಉತ್ತಮ ಆಫರ್ ನೀಡ್ತಾ ಇದೆ.

ಕೇವಲ 599 ರೂಪಾಯಿಯಲ್ಲಿ ನೀವು ದೇಶಿಯ ವಿಮಾನ ಪ್ರಯಾಣ ಮಾಡಬಹುದಾಗಿದೆ. ಟಿಕೆಟ್ ಬುಕ್ಕಿಂಗ್ ಮೂರು ದಿನ ನಡೆಯಲಿದ್ದು, ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ. ನಾಳೆ ಮಧ್ಯರಾತ್ರಿಯವರೆಗೆ ಬುಕ್ಕಿಂಗ್ ಗೆ ಅವಕಾಶವಿದೆ. ಮಾರ್ಚ್ ಒಂದರಿಂದ ಏಪ್ರಿಲ್ 13 ರವರೆಗೆ ಈ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ.

ಆದ್ರೆ ಕಂಪನಿ ರಿಯಾಯಿತಿ ದರಕ್ಕೆ ಕೆಲವೊಂದು ನಿಯಮಗಳನ್ನು ಘೋಷಿಸಿದೆ. ಇದು ಕೇವಲ ದೇಶಿಯ ವಿಮಾನಕ್ಕೆ ಮಾತ್ರ ಅನ್ವಯಿಸಲಿದೆ. ಕೆಲ ಮಾರ್ಗಗಳಿಗೆ ಮಾತ್ರ ರಿಯಾಯಿತಿ ಸಿಗಲಿದೆ.  ಕೇವಲ ಒನ್ ವೇ ಪ್ರಯಾಣಕ್ಕೆ ಮಾತ್ರ 599 ಟಿಕೆಟ್ ಸಿಗಲಿದೆ. ವಾಪಸ್ ಬರಲು ಬೇರೆ ಬುಕ್ ಮಾಡಬೇಕಾಗುತ್ತದೆ. ಅಂತರಾಷ್ಟ್ರೀಯ ಹಾರಾಟಕ್ಕೆ ಇದರಲ್ಲಿ ಅವಕಾಶವಿಲ್ಲ. ಜೊತೆಗೆ ಗುಂಪು ಟಿಕೆಟ್ ಬುಕ್ಕಿಂಗ್ ಕೂಡ ಸಾಧ್ಯವಿಲ್ಲ. ಸದ್ಯ ಆನ್ಲೈನ್ ಮೂಲಕ ಮಾತ್ರ ಬುಕ್ಕಿಂಗ್ ನಡೆಯುತ್ತಿದ್ದು, ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಹಣ ವಾಪಸ್ ನೀಡಲಾಗುವುದಿಲ್ಲ. ಆದ್ರೆ ತೆರಿಗೆ ಹಣ ಮರಳಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...