alex Certify
ಕನ್ನಡ ದುನಿಯಾ       Mobile App
       

Kannada Duniya

ರಬನೇ ಬನಾದಿ ಜೋಡಿ: 24 ಇಂಚು ಉದ್ದದ ಹುಡುಗನಿಗೆ ಸಿಕ್ಕಿದ್ದಾಳೆ ತಕ್ಕ ಮಡದಿ

pramod-poonam

ಮದುವೆ ಸ್ವರ್ಗದಲ್ಲಾಗಿರುತ್ತೆ ಅಂತಾ ದೊಡ್ಡವರು ಹೇಳಿದ್ದಾರೆ. ಉತ್ತರ ಪ್ರದೇಶದ ಜೋಡಿಯೊಂದನ್ನು ನೋಡಿದ್ರೆ ಈ ಮಾತು ಸತ್ಯ ಎನ್ನಿಸುತ್ತದೆ. ಅತಿ ಕುಳ್ಳಗಿದ್ದ ವ್ಯಕ್ತಿಗೆ ಸರಿಯಾದ ಜೋಡಿ ಸಿಕ್ಕಿದೆ.

ಅಲಹಾಬಾದ್ ಜಿಲ್ಲೆಯ ಜಿಂದ್ ಗ್ರಾಮದಲ್ಲಿ ನೆಲೆಸಿರುವ ಪ್ರಮೋದ್ ಕೇವಲ 24 ಇಂಚು ಉದ್ದ ಇದ್ದಾನೆ. ಮನೆಯ ಪಕ್ಕದಲ್ಲಿಯೇ ಒಂದು ಸಣ್ಣ ಅಂಗಡಿ ನೋಡಿಕೊಳ್ತಿದ್ದಾನೆ ಪ್ರಮೋದ್. ಅವನ ಉದ್ದ ಕೇವಲ 2 ಫೀಟ್ ಇದೆ. ಸಣ್ಣಗಿರುವ ಕಾರಣ ಆತನಿಗೆ ಸರಿಯಾದ ಜೋಡಿ ಸಿಗದೆ ಮದುವೆಯಾಗಿರಲಿಲ್ಲ. ಆತನ ವಯಸ್ಸು 44 ವರ್ಷ ದಾಟುತ್ತ ಬಂದಿದೆ. ಹಾಗಾಗಿ ಮದುವೆ ಆಸೆಯನ್ನೂ ಆತ ಬಿಟ್ಟಿದ್ದ. ಆದ್ರೆ ಮದುವೆ ಭಾಗ್ಯ ಆತನ ಹಣೆಯಲ್ಲಿ ಬರೆದಿತ್ತು.

ಒಂದು ದಿನ ಪ್ರಮೋದ್ ಸ್ನೇಹಿತ ರಾಜು ಎಂಬಾತನಿಗೆ ಮಾರುಕಟ್ಟೆಯಲ್ಲಿ ಒಂದು ಹುಡುಗಿ ಕಣ್ಣಿಗೆ ಬಿದ್ದಿದ್ದಾಳೆ. ಆಕೆ ಉದ್ದ ಕೂಡ ಸುಮಾರು 2 ಫೀಟ್ ಇರಬಹುದು. ನೆರೆಯವರ ಸಹಾಯದಿಂದ ಹುಡುಗಿ ಮನೆಯನ್ನು ಪತ್ತೆ ಹಚ್ಚಿದ ರಾಜು, ಪ್ರಮೋದ್ ಗೆ ತಿಳಿಸಿದ್ದಾನೆ. ಅಲ್ಲದೆ, ಎರಡೂ ಕುಟುಂಬಗಳು ಮಾತುಕತೆ ನಡೆಸಿ, ಮದುವೆಗೆ ಒಪ್ಪಿಗೆ ಸೂಚಿಸಿವೆ.

ವಧು ಪೂನಂ ವಯಸ್ಸು ಕೂಡ 33 ದಾಟಿದೆ. ಮದುವೆಯಾಗದೆ ಆಕೆ ನೋವನ್ನನುಭವಿಸಿದ್ದಳಂತೆ. ಬಾಲ್ಯದಿಂದಲು ನೋವಿನಲ್ಲಿಯೇ ದಿನ ಕಳೆದಿರುವ ಪೂನಂ, ಗಂಡನ ಮನೆಯವರ ಜೊತೆ ಸಂತೋಷವಾಗಿರುವುದಾಗಿ ತಿಳಿಸಿದ್ದಾಳೆ. ಸಣ್ಣಗಿದ್ದೀಯಾ, ಮದುವೆಯಾಗುವುದಿಲ್ಲ ಎಂದು ಛೇಡಿಸುತ್ತಿದ್ದ ಜನರು ಈಗ ಬಾಯಿ ಮುಚ್ಚಿದ್ದಾರೆ ಎನ್ನುತ್ತಾನೆ ಪ್ರಮೋದ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...