alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಿಲೇಶ್–ಮುಲಾಯಂ ಸಂಧಾನಕ್ಕೆ ನಡೆದಿದೆ ಕಸರತ್ತು

akhilesh

ಹಾವು-ಮುಂಗುಸಿಯಂತೆ ಕಿತ್ತಾಡುತ್ತಿರುವ ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಮಧ್ಯೆ ಸಂಧಾನ ಕಸರತ್ತು ಶುರುವಾಗಿದೆ. ಎಸ್ಪಿ ಮುಖಂಡ ಅಜಂ ಖಾನ್ ಮಧ್ಯಸ್ಥಿಕೆಯಲ್ಲಿ ಬೆಳಗ್ಗೆ ಅಖಿಲೇಶ್ ಹಾಗೂ ಮುಲಾಯಂ ಫೋನ್ ನಲ್ಲಿ ಮಾತುಕತೆ ನಡೆಸಿದ್ರು. ನಂತರ ತಂದೆಯನ್ನು ಭೇಟಿ ಮಾಡಲು ಅಖಿಲೇಶ್, ಮುಲಾಯಂ ನಿವಾಸಕ್ಕೂ ತೆರಳಿದ್ದಾರೆ.

ತಂದೆ-ಮಗನ ಎರಡೂ ಬಣಗಳು ಈಗ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗಾಗಿ ಜಟಾಪಟಿ ಶುರುಮಾಡಿದ್ದಾರೆ. ನಿನ್ನೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ್ದ ಅಖಿಲೇಶ್ ಯಾದವ್ ಬಣ, ಅವರಿಗೆ ಶೇ.90 ರಷ್ಟು ಸದಸ್ಯರ ಬೆಂಬಲವಿದ್ದು, ಸೈಕಲ್ ಚಿಹ್ನೆಯನ್ನು ನೀಡುವಂತೆ ಮನವಿ ಮಾಡಿದ್ದರು, ಇವತ್ತು ಕೂಡ ಅಖಿಲೇಶ್ ಅವರ ಚಿಕ್ಕಪ್ಪ ರಾಮ್ ಗೋಪಾಲ್ ಯಾದವ್ ಆಯುಕ್ತರನ್ನು ಭೇಟಿಯಾಗಿದ್ದಾರೆ.

ಅಖಿಲೇಶ್ ಯಾದವ್ ಅವರನ್ನು ಸರ್ವಾನುಮತದಿಂದ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಬಗ್ಗೆ ಎಲ್ಲಾ ಮುಖಂಡರುಗಳ ಸಹಿ ಸಂಗ್ರಹಿಸಲಾಗಿದೆ. ಇನ್ನೊಂದ್ಕಡೆ ಮುಲಾಯಂ ಸಿಂಗ್ ಯಾದವ್ ಕೂಡ ಮಗನ ಎದುರು ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ಸೈಕಲ್ ಚಿಹ್ನೆ ಪಡೆಯಲು ಸರ್ಕಸ್ ಮಾಡ್ತಿದ್ದಾರೆ. ಮುಲಾಯಂ ಬಣ ಕೂಡ ಚುನಾವಣಾ ಆಯೋಗಕ್ಕೆ ಎಡತಾಕುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...