alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್-ಎಸ್ಪಿ ಮೈತ್ರಿ ಉಳಿಸಿಕೊಳ್ಳಲು ಪ್ರಿಯಾಂಕಾ ಸರ್ಕಸ್

priyanka-gandhi-siasat

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ದೋಸ್ತಿ ರಾಜಕೀಯ ಶುರು ಮಾಡಿವೆ. ಆದ್ರೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ಮಧ್ಯೆ ಒಮ್ಮತ ಮೂಡುತ್ತಿಲ್ಲ. ಇದ್ರಿಂದ ಪಕ್ಷಗಳ ಮೈತ್ರಿಗೂ ಧಕ್ಕೆ ಬರುವ ಸಾಧ್ಯತೆಗಳು ಗೋಚರಿಸಲಾರಂಭಿಸಿದ್ದರಿಂದ ಪ್ರಿಯಾಂಕಾ ಗಾಂಧಿ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸಿಎಂ ಅಖಿಲೇಶ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಲು ತಮ್ಮ ಆಪ್ತರನ್ನು ಉತ್ತರಪ್ರದೇಶಕ್ಕೆ ಕಳುಹಿಸಿಕೊಟ್ಟಿದ್ದಾರೆ. ಎಸ್ಪಿ ಒಟ್ಟು 210 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ, ಕಾಂಗ್ರೆಸ್ ಹಿಡಿತದಲ್ಲಿದ್ದ 10 ಕ್ಷೇತ್ರಗಳಲ್ಲಿ ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಖಿಲೇಶ್ ಮುಂದಾಗಿರೋದು ಕಾಂಗ್ರೆಸ್ ಅಸಮಾಧಾನಕ್ಕೆ ಕಾರಣ.

ಗಾಂಧಿ ಕುಟುಂಬದವರ ವಶವಾಗಿರುವ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕೂಡ ಎಸ್ಪಿ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದಾಗಿರೋದು ಕೈಪಾಳಯಕ್ಕೆ ಬೇಸರ ತರಿಸಿದೆ. ಅಖಿಲೇಶ್ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಇರೋದ್ರಿಂದ ಮೈತ್ರಿ ಮುರಿದು ಬೀಳೋ ಸಾಧ್ಯತೆಯಿದ್ದು,  ಪ್ರಿಯಾಂಕಾ ಮಾತುಕತೆಗೆ ಮುಂದಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಕಳಿಸಿದ್ದ 11 ಮೆಸೇಜ್ ಗಳಿಗೂ ಅಖಿಲೇಶ್ ಯಾದವ್ ರಿಪ್ಲೈ ಮಾಡಿಲ್ಲ, ಅವರ ಗೊಂದಲಗಳು, ಪ್ರಶ್ನೆಗಳಿಗೆ ಉತ್ತರಿಸಿಲ್ಲ.

ಮೊದಲು ಕಾಂಗ್ರೆಸ್ ಗೆ 100 ಸೀಟುಗಳನ್ನು ಬಿಟ್ಟುಕೊಡುವುದಾಗಿ ಹೇಳಿದ್ದ ಸಮಾಜವಾದಿ ಪಕ್ಷ, ಈಗ ಅದರ ಬಗ್ಗೆ ಮರು ಚಿಂತನೆ ನಡೆಸ್ತಾ ಇದೆ. ರಾಹುಲ್ ಗಾಂಧಿ ಲಖ್ನೋಗೆ ಆಗಮಿಸಿ ಎಸ್ಪಿ, ಕಾಂಗ್ರೆಸ್ ಮೈತ್ರಿ ಬಗ್ಗೆ ಬಹಿರಂಗ ಘೋಷಣೆ ಮಾಡಬೇಕು ಅನ್ನೋದು ಅಖಿಲೇಶ್ ಅಭಿಪ್ರಾಯ. ಆದ್ರೆ ಕಾಂಗ್ರೆಸ್ ಇದಕ್ಕೆ ಸಮ್ಮತಿಸಿಲ್ಲ. ಇನ್ನೊಂದು ಮೂಲದ ಪ್ರಕಾರ ಕಾಂಗ್ರೆಸ್ ದಿಢೀರನೆ 103 ಸೀಟುಗಳಿಂದ 138 ಸ್ಥಾನಗಳು ಬೇಕೆಂದು ಡಿಮ್ಯಾಂಡ್ ಮಾಡ್ತಿರೋದ್ರಿಂದ ಸಮಾಜವಾದಿ ಪಕ್ಷ ಮುನಿಸಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...