alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾ ಮೈತ್ರಿಯಲ್ಲಿ ಕಾಂಗ್ರೆಸ್ ದೂರವಿಡಲು ಮುಂದಾದ ಎಸ್ಪಿ-ಬಿಎಸ್ಪಿ…!

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಭರ್ಜರಿ ತಯಾರಿ ಶುರುವಾಗಿದೆ.ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರ ಹಾಕಿ ಮೈತ್ರಿ ಮಾತುಕತೆ ನಡೆಸುತ್ತಿವೆ. ನಿರ್ಣಾಯಕ ರಾಜ್ಯ ಉತ್ತರ ಪ್ರದೇಶದಲ್ಲಿ ಮಹಾ ಮೈತ್ರಿ ಬಗ್ಗೆ ಬಿಸಿ ಬಿಸಿ ಚರ್ಚೆಯಾಗ್ತಿದೆ. ಎಸ್ಪಿ-ಬಿಎಸ್ಪಿ ಜೊತೆ ಕಾಂಗ್ರೆಸ್ ಒಂದಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಎಸ್ಪಿ-ಬಿಎಸ್ಪಿ ಕಾಂಗ್ರೆಸ್ ಹೊರಗಿಡುವ ಯೋಚನೆ ಮಾಡ್ತಿದೆ.

2017 ರ ವಿಧಾನಸಭೆ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಬಿಎಸ್ಪಿ-ಎಸ್ಪಿ ಈ ನಿರ್ಣಯ ಕೈಗೊಂಡಿದೆ ಎನ್ನಲಾಗ್ತಿದೆ. 2017 ರ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್-ಆರ್ಎಲ್ಡಿ ಮೈತ್ರಿ ಮಾಡಿಕೊಂಡಿದ್ದವು. ಏಕಾಂಗಿಯಾಗಿ ಮೈದಾನಕ್ಕಿಳಿದಿದ್ದ ಬಿಜೆಪಿ ಗೆಲುವಿನ ನಗೆ ಬೀರಿತ್ತು.

2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಶೇಕಡಾ 42.63, ಎಸ್ಪಿಗೆ 22.35,ಬಿಎಸ್ಪಿಗೆ 19.77 ಹಾಗೂ ಕಾಂಗ್ರೆಸ್ ಗೆ 7.53 ಮತಗಳು ಸಿಕ್ಕಿದ್ದವು. 2017 ರಲ್ಲಿ ಕಾಂಗ್ರೆಸ್ ಗೆ ಶೇಕಡಾ 6.25 ಮತವಾದ್ರೆ ಎಸ್ಪಿಗೆ ಸಿಕ್ಕಿದ್ದು 21.82 ಮತ. ಕಾಂಗ್ರೆಸ್ ಜೊತೆ ಸೇರಿದ ಬಿಎಸ್ಪಿಗೆ ನಷ್ಟವಾಯ್ತೇ ಹೊರತು ಲಾಭವಾಗಲಿಲ್ಲ. ಶೇಕಡಾ 1.5 ರಷ್ಟು ಮತ ಕಡಿಮೆಯಾಗಿತ್ತು. ಇದೆಲ್ಲವನ್ನೂ ಪರಿಗಣಿಸಿ ಬಿಎಸ್ಪಿ ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...