alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಮಣಿಸಲು ಎಂಥ ದೊಡ್ಡ ತ್ಯಾಗಕ್ಕೂ ತಯಾರಿದ್ದಾರೆ ಅಖಿಲೇಶ್

ಲೋಕಸಭೆ ಚುನಾವಣೆಗೆ ತಯಾರಿ ಜೋರಾಗಿ ನಡೆಯುತ್ತಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಪಡೆ ಮಣಿಸುವುದು ವಿರೋಧ ಪಕ್ಷಗಳ ಗುರಿಯಾಗಿದೆ. ಹಾಗಾಗಿ ಬಿಜೆಪಿ ಸೋಲಿಸಲು ಯಾವ ತ್ಯಾಗಕ್ಕೂ ಸಿದ್ಧ ಎಂಬ ನಿಲುವನ್ನು ರಾಜಕೀಯ ನಾಯಕರು ತಳೆದಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಿಎಂ, ಎಸ್ಪಿ ನಾಯಕ ಅಖಿಲೇಶ್ ಯಾದವ್ ಕೂಡ ಬಿಜೆಪಿ ಮಣಿಸಲು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದಾರೆ.

ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಕೈಜೋಡಿಸುವ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿ ಮಣಿಸಲು ಎಂಥ ತ್ಯಾಗಕ್ಕೂ ಸಿದ್ಧ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. 2019 ರವರೆಗೆ ಬಿಎಸ್ಪಿ ಜೊತೆಗಿನ ಮೈತ್ರಿ ಮುಂದುವರೆಯಲಿದೆ. ಕೆಲ ಸೀಟುಗಳನ್ನು ಬಿಡುವ ಸಂದರ್ಭ ಬಂದಲ್ಲಿ ಅದಕ್ಕೂ ನಾವು ಸಿದ್ಧ. ನಮ್ಮ ಗುರಿ ಬಿಜೆಪಿ ಸೋಲಿಸುವುದು ಎಂದು ಅಖಿಲೇಶ್ ಹೇಳಿದ್ದಾರೆ.

ಮೇ ತಿಂಗಳಿನಲ್ಲಿ ನಡೆದ  ಲೋಕಸಭೆ ಉಪಚುನಾವಣೆಯ ಎರಡು ಕ್ಷೇತ್ರಗಳಲ್ಲಿ ಎಸ್ಪಿ, ಬಿಎಸ್ಪಿ ಜೊತೆ ಕೈ ಜೋಡಿಸಿತ್ತು. ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯನ್ನೂ ಈ ಎರಡು ಪಕ್ಷಗಳು ಒಂದಾಗಿ ಎದುರಿಸಿದ್ದವು. ಕರ್ನಾಟಕದ ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣ ವಚನದ ವೇಳೆ ಅಖಿಲೇಶ್ ಹಾಗೂ ಮಾಯಾವತಿ ಒಂದೇ ವೇದಿಕೆ ಮೇಲೆ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...