alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಯುವ ಮುನ್ನ ತಾಯಿಯ ‘ಕ್ಷಮೆ’ ಕೇಳಿದ್ದಳು ಮಗಳು

ಗುರುವಾರದಂದು ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕಿ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ದೊರೆತಿದೆ. ಸಾವಿಗೂ ಮುನ್ನ ಸಾಯಿ ದೀಪ್ತಿ ಡೆತ್ ನೋಟ್ ಬರೆದಿಟ್ಟಿದ್ದು, ಶಾಲಾ ಆಡಳಿತ ಮಂಡಳಿಯ ಅಮಾನವೀಯ ಮುಖ ಅನಾವರಣಗೊಂಡಿದೆ.

ಶಾಲಾ ಶುಲ್ಕವನ್ನು ಕಟ್ಟಿಲ್ಲವೆಂಬ ಕಾರಣಕ್ಕೆ 9 ನೇ ತರಗತಿ ವಿದ್ಯಾರ್ಥಿನಿಯಾದ ಸಾಯಿ ದೀಪ್ತಿಯನ್ನು ಶಿಕ್ಷಕರು ಸಹಪಾಠಿಗಳ ಎದುರಲ್ಲೇ ಅವಮಾನಿಸಿದ್ದಾರೆ. ಅಷ್ಟೇ ಅಲ್ಲ ಆಕೆಯನ್ನು ಕೊಠಡಿಯಿಂದ ಹೊರ ನಿಲ್ಲಿಸಿದ್ದಾರೆ ಕೂಡಾ.

ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲವೆಂದು ಶಿಕ್ಷಕರು ಹೇಳಿದ್ದು, ಇದು ಸಾಯಿ ದೀಪ್ತಿಯನ್ನು ಇನ್ನಷ್ಟು ಹತಾಶೆಗೊಳಗಾಗುವಂತೆ ಮಾಡಿದೆ. ಶಾಲೆಯಿಂದ ಸಪ್ಪೆ ಮೋರೆಯೊಂದಿಗೆ ಮನೆಗೆ ಬಂದ ಸಾಯಿ ದೀಪ್ತಿ, ಹಿರಿಯ ಸಹೋದರಿ ಬಳಿ ತನಗಾದ ಅವಮಾನದ ಕುರಿತು ಹೇಳಿಕೊಂಡು ಕಣ್ಣೀರಿಟ್ಟಿದ್ದಾಳೆ. ಬಳಿಕ ‘ನನಗೆ ಅವರು ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. ನನ್ನನ್ನು ಕ್ಷಮಿಸು ಅಮ್ಮ’ ಎಂದು ಬರೆದಿಟ್ಟು ನೇಣು ಹಾಕಿಕೊಂಡಿದ್ದಾಳೆ.

ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಾಡಿದ ಅಮಾನವೀಯ ಕಾರ್ಯದಿಂದಾಗಿ ಮುಗ್ದ ಜೀವವೊಂದು ಬಲಿಯಾದಂತಾಗಿದ್ದು, ಪೊಲೀಸರು ಶುಕ್ರವಾರದಂದು ಜ್ಯೋತಿ ಮಾಡೆಲ್ ಸ್ಕೂಲ್ ನ ಇಬ್ಬರು ಅಧಿಕಾರಿಗಳು ಹಾಗೂ ಶಿಕ್ಷಕರನ್ನು ಬಂಧಿಸಿದ್ದು, ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...