alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರಿಗೆ ಇಲ್ಲಿದೆ ಸಿಹಿ ಸುದ್ದಿ

ಒಮ್ಮೊಮ್ಮೆ ರೈಲು ಏರಿ ಕುಳಿತರೆ ನಾವು ಇಳಿದುಕೊಳ್ಳೋ ಸ್ಥಳ ಬಂದ್ರೂ ಗೊತ್ತಾಗೋದೇ ಇಲ್ಲ. ರಾತ್ರಿ ಪ್ರಯಾಣದಲ್ಲಂತೂ ಒಂದೆರಡು ನಿಲ್ದಾಣ ಮುಂದೆ ಹೋಗಿ ಇಳಿಯೋದು ಕಾಮನ್. ಯಾಕಂದ್ರೆ ಯಾವ ನಿಲ್ದಾಣ ಬಂದಿದೆ ಅನ್ನೋದನ್ನು ಪ್ರಕಟಿಸುವುದಿಲ್ಲ.

ಈ ಸಮಸ್ಯೆಯನ್ನು ತಪ್ಪಿಸಲೆಂದೇ ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗಾಗಿ ವಿನೂತನ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಯಾವ ನಿಲ್ದಾಣಕ್ಕೆ ರೈಲು ಆಗಮಿಸಿದೆ ಅನ್ನೋ ಬಗ್ಗೆ ನಿಖರ ಮಾಹಿತಿ ತಿಳಿಯಲು ಸಾಧ್ಯವಾಗುವಂತಹ ಹೊಸ ವ್ಯವಸ್ಥೆಯನ್ನು  ಕಾರ್ಯರೂಪಕ್ಕೆ ತರಲಿದೆ.

ಜಿಪಿಎಸ್ ಆಧಾರಿತ ಈ ವ್ಯವಸ್ಥೆಯನ್ನು ರೈಲುಗಳಲ್ಲಿ ಅಳವಡಿಸಲಾಗುತ್ತದೆ. ಅದು ಆಟೋಮ್ಯಾಟಿಕ್ ಆಗಿ ಟ್ರೈನ್ ಲೊಕೇಶನ್ ಬಗ್ಗೆ ಅಪ್ಡೇಟ್ ಮಾಡಲಿದೆ. ಎಲ್ಲಾ 16 ವಲಯದ ರೈಲುಗಳಿಗೂ ಹೊಸ ಸಿಸ್ಟಮ್ ಅಳವಡಿಸುವಂತೆ ರೈಲ್ವೆ ಸಚಿವ ಪಿಯೂಶ್ ಗೋಯಲ್ ಸೂಚನೆ ನೀಡಿದ್ದಾರೆ.

ಮೊದಲು ಇದನ್ನು ದೆಹಲಿ-ಹೌರಾ, ದೆಹಲಿ-ಮುಂಬೈ ಮಾರ್ಗದ ರೈಲುಗಳಲ್ಲಿ ಅಳವಡಿಸಲಾಗುತ್ತದೆ. ನಂತರ ಉಳಿದ ಸ್ಥಳಗಳಿಗೂ ವಿಸ್ತರಿಸಲಾಗುತ್ತದೆ. ಮ್ಯಾಪ್ಸ್ ಆಫ್ ಇಂಡಿಯಾ ಜೊತೆಗೆ ಕೈಜೋಡಿಸಿರುವ ರೈಲ್ವೆ ಇಲಾಖೆ ಈ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ.

ಅಕ್ಟೋಬರ್ ನಲ್ಲಿ ಮುಘಲ್ ಸರಾಯ್ ವಲಯದ ರೈಲುಗಳಲ್ಲಿ ಇದನ್ನು ಪರೀಕ್ಷಾರ್ಥವಾಗಿ ಅಳವಡಿಸಲಾಗಿತ್ತು. ರೈಲು ಯಾವ ಸ್ಥಳದಲ್ಲಿ ಸಂಚರಿಸುತ್ತದೆ ಅನ್ನೋದ್ರ ಜೊತೆಜೊತೆಗೆ ಎಷ್ಟು ವೇಗದಲ್ಲಿ ಚಲಿಸ್ತಾ ಇದೆ ಎಂಬ ವಿವರ ಕೂಡ ಪ್ರಯಾಣಿಕರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...