alex Certify
ಕನ್ನಡ ದುನಿಯಾ       Mobile App
       

Kannada Duniya

ಬಾತ್ ಟಬ್ ತೆಗೆಯುವ ನಿರ್ಧಾರ ಕೈಗೊಳ್ತಿವೆ 5 ಸ್ಟಾರ್ ಹೊಟೇಲ್ಸ್

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇನ್ನಿಲ್ಲ. ದುಬೈನ ಸ್ಟಾರ್ ಹೊಟೇಲ್ ನಲ್ಲಿ ಬಾತ್ ಟಬ್ ಶ್ರೀದೇವಿ ಪ್ರಾಣ ತೆಗೆದಿದೆ. ಶ್ರೀದೇವಿಯೊಂದೇ ಅಲ್ಲ ಅನೇಕರು ಬಾತ್ ಟಬ್ ಗೆ ಬಲಿಯಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದ ಅನೇಕ ಸ್ಟಾರ್ ಹೊಟೇಲ್ ಗಳು ಮಹತ್ವದ ನಿರ್ಧಾರ ಕೈಗೊಳ್ಳುತ್ತಿವೆ. ಹೊಟೇಲ್ ರೂಮಿನಲ್ಲಿರುವ ಬಾತ್ ಟಬ್ ತೆಗೆದು ಹಾಕುವ ಮಹತ್ವದ ನಿರ್ಧಾರದ ಬಗ್ಗೆ ಚಿಂತನೆ ನಡೆಸುತ್ತಿವೆ.

ಫೈವ್ ಸ್ಟಾರ್ ಹೊಟೇಲ್ ತಾಜ್, ಒಬೆರಾಯ್, ಐಟಿಸಿ ಬಾತ್ ಟಬ್ ತೆಗೆದು ಹಾಕುವ ಬಗ್ಗೆ ಚಿಂತನೆ ನಡೆಸುತ್ತಿದೆ. ಬಾತ್ ಟಬ್ ಬದಲು ಶವರ್ ಬಾತ್ ಅಳವಡಿಸುವ ಆಲೋಚನೆಯಲ್ಲಿದೆ. ಈ ಹೊಟೇಲ್ ಗಳು ಬಾತ್ ರೂಂನಲ್ಲಿ ನೀಡಲಾಗುವ ವ್ಯವಸ್ಥೆ ಬಗ್ಗೆ ಪುನಃ ಪರಿಶೀಲನೆ ನಡೆಸಲು ನಿರ್ಧರಿಸಿವೆ. ಒಳ್ಳೆ ವ್ಯವಸ್ಥೆ ಜೊತೆ ಬೇಗ ಸ್ನಾನ ಮಾಡಲು ಬಯಸುವ ಗ್ರಾಹಕರನ್ನು ಹೊಟೇಲ್ ಗಳು ಪರಿಗಣನೆಗೆ ತೆಗೆದುಕೊಳ್ತಿವೆ. ಜೊತೆಗೆ ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ ಬಾತ್ ಟಬ್ ನಂತ ಸೌಲಭ್ಯದ ಅವಶ್ಯಕತೆಯಿಲ್ಲ ಎಂಬುದನ್ನು ಅವರು ಮನಗಂಡಿದ್ದಾರೆ.

ಮ್ಯಾರಿಯೊಟ್ ಹಾಗೂ ಹಿಲ್ಟನ್ ಹೊಟೇಲ್ ನಲ್ಲಿ ಮೊದಲಿನಿಂದಲೇ ಬಾತ್ ಟಬ್ ಸೌಲಭ್ಯವಿಲ್ಲ. 30ಕ್ಕೂ ಹೆಚ್ಚು ಕಡೆ ಹೊಟೇಲ್ ವ್ಯವಸ್ಥೆ ನೀಡುತ್ತಿರುವ ಒಬೆರಾಯ್ ಹೊಟೇಲ್ ನಲ್ಲಿ ಶೇಕಡಾ 10ರಷ್ಟು ಮಾತ್ರ ಬಾತ್ ಟಬ್ ಬಳಕೆಯಾಗ್ತಿದೆಯಂತೆ. ಹಾಗಾಗಿ ಮುಂದಿನ ನಿರ್ಮಾಣದ ವೇಳೆ ಬಾತ್ ಟಬ್ ಬಗ್ಗೆ ಇನ್ನೊಮ್ಮೆ ವಿಚಾರ ನಡೆಸುವುದಾಗಿ ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...