alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರೀಯ ಹೆದ್ದಾರಿಗಳಿಗೆ ಸಿಗಲಿದೆ ಸ್ಟಾರ್ ರೇಟಿಂಗ್

ಭಾರತದಲ್ಲಿರೋ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೂ ಇನ್ಮೇಲೆ ಸ್ಟಾರ್ ರೇಟಿಂಗ್ ಸಿಗಲಿದೆ. ಹೈವೇ ಗುಣಮಟ್ಟದ ಆಧಾರದ ಮೇಲೆ ಸೊನ್ನೆಯಿಂದ 5 ರವರೆಗೂ ರೇಟಿಂಗ್ ನೀಡಲಾಗುತ್ತದೆ.

ದೆಹಲಿ-ಮುಂಬೈ ಮತ್ತು ಮುಂಬೈ-ಚೆನ್ನೈ ನಡುವಣ ಕಾರಿಡಾರ್ ಗಳ ಸಮೀಕ್ಷೆ ನಡೆಸಲಾಗ್ತಿದೆ. ಸದ್ಯದಲ್ಲೇ ಫಲಿತಾಂಶ ಕೂಡ ಹೊರಬೀಳಲಿದೆ. ಮೆಗಾ ಹೈವೇ ಪ್ರೋಗ್ರಾಮ್ ಅಡಿಯಲ್ಲಿ ಒಂದು ದಶಕದಿಂದ ಸರ್ವೇ ಕಾರ್ಯ ನಡೆಯುತ್ತಿದೆ. ವರ್ಲ್ಡ್ ಬ್ಯಾಂಕ್ ಮತ್ತು ಬ್ಲೂಂಬರ್ಗ್ ಫಿಲಾಂತ್ರಪೀಸ್ ನೆರವಿನಿಂದ ಅಂತರಾಷ್ಟ್ರೀಯ ರಸ್ತೆ ಮೌಲ್ಯಮಾಪನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜಸ್ತಾನ, ಗುಜರಾತ್, ಕರ್ನಾಟಕ, ಕೇರಳ, ಅಸ್ಸಾಂ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ 10,000 ಕಿಮೀ ರಾಜ್ಯ ಹೆದ್ದಾರಿಗಳ ಸರ್ವೆ ಕಾರ್ಯ ಮಾಡಲಾಗ್ತಿದೆ. ಈ ಪೈಕಿ ಶೇ.75ರಷ್ಟು ರಸ್ತೆಗಳಿಗೆ 2 ಅಥವಾ ಎರಡಕ್ಕಿಂತ ಕಡಿಮೆ ರೇಟಿಂಗ್ ಸಿಕ್ಕಿದೆ.

ಯಾಕಂದ್ರೆ ಈ ಹೈವೇಗಳು ವಾಹನ ಸವಾರರು ಮತ್ತು ಪಾದಚಾರಿಗಳ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿವೆ. ದೇಶದಲ್ಲಿ ಸಂಭವಿಸ್ತಾ ಇರೋ ಸಾವಿನ ಪ್ರಮಾಣದಲ್ಲಿ ಶೇ.60 ರಷ್ಟು ರಸ್ತೆ ಅಪಘಾತಗಳಿಂದ್ಲೇ ಆಗುತ್ತಿದೆ. 2016 ರಲ್ಲಿ 90,000ಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...