alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮ ಕ್ಷೇತ್ರದ ಜನರಿಗೆ ಪತ್ರ ಬರೆದ ಸೋನಿಯಾ ಗಾಂಧಿ

sonia_uprfdnh

ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಎಲ್ಲ ಪಕ್ಷಗಳ ರಾಜಕಾರಣಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತ್ರ ಮತಪ್ರಚಾರ ನಡೆಸಲಿಲ್ಲ. ಇದೇ ಮೊದಲ ಬಾರಿ ಸೋನಿಯಾ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಮತಯಾಚನೆ ಮಾಡಿಲ್ಲ. ಆದ್ರೆ ಸೋನಿಯಾ ಗಾಂಧಿಯವರ ಭಾವನಾತ್ಮಕ ಪತ್ರ ರಾಯ್ಬರೇಲಿ ಜನರನ್ನು ತಲುಪಿದೆ.

ಎಷ್ಟು ಪ್ರಯತ್ನಪಟ್ಟರೂ ನನ್ನ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ ಸೋನಿಯಾ. ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದವರು ನೀವು ಎನ್ನುವ ಮೂಲಕ ರಾಯ್ಬರೇಲಿ ಕ್ಷೇತ್ರದ ಜನರಿಗೆ ಧನ್ಯವಾದ ಹೇಳಿದ್ದಾರೆ. ನನ್ನ-ನಿಮ್ಮ ನಡುವೆ ವಿಶೇಷ ಸಂಬಂಧವಿದ್ದು, ಅದು ನನ್ನ ಮಹಾನ್ ಆಸ್ತಿ ಎಂದಿದ್ದಾರೆ ಮೇಡಂ.

ಅಚ್ಛೇ ದಿನದ ಭರವಸೆ ನೀಡಿದ್ದ ಪ್ರಧಾನ ಮಂತ್ರಿ ಮೋದಿ ನಿಮ್ಮಲ್ಲಿರುವುದನ್ನೆಲ್ಲ ಕಸಿದುಕೊಂಡಿದ್ದಾರೆ. ನಿಮ್ಮ ಆಸ್ತಿ, ಉದ್ಯೋಗವಾಯ್ತು. ಈಗ ಬೆವರು ಸುರಿಸಿ ದುಡಿದ ಹಣವನ್ನೂ ಕಸಿದುಕೊಳ್ಳುತ್ತಿದ್ದಾರೆಂದು ಸೋನಿಯಾ ಆರೋಪ ಮಾಡಿದ್ದಾರೆ. ಖುರ್ಚಿಗಾಗಿ ಮೋದಿ ಏನು ಮಾಡಲೂ ಸಿದ್ಧ ಎಂದಿದ್ದಾರೆ ಸೋನಿಯಾ.

ಮೋದಿ ಆಡಳಿತದಿಂದ ರೈತರಿಗೆ ಭಾರೀ ನಷ್ಟವಾಗ್ತಾ ಇದೆ ಎಂದು ದೂರಿದ್ದಾರೆ. ಹಾಗೆ ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...