alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧದ ಬೆನ್ನಲ್ಲೇ ಫೇಮಸ್ ಆಗ್ಬಿಟ್ಟಿದ್ದಾಳೆ ಸೋನಂ..!

sonamನವೆಂಬರ್ 8 ರಂದು 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿದ ವಿಷಯ ಪ್ರಕಟಿಸುವ ಮೂಲಕ ಪ್ರಧಾನಿ ಮೋದಿ ಇಡೀ ದೇಶವನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿದ ಬೆನ್ನಲ್ಲೇ ಸೋನಂ ಗುಪ್ತಾ ಎಂಬ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ‘ಸೋನಂ ಗುಪ್ತಾ ಬೇವಫಾ ಹೈ’ ಎಂದು ಬರೆದಿರುವ ನೋಟು, ಮತ್ತು ನಾಣ್ಯಗಳನ್ನು ಹಲವರು ಪೋಸ್ಟ್ ಮಾಡಿದ್ದಾರೆ.

ಹಲವು ನಾಣ್ಯ ಮತ್ತು ನೋಟಿನ ಮೇಲೆ ಸೋನಂ ಗುಪ್ತಾ ಹೆಸರನ್ನು ಬರೆಯಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯಲ್ಲಿರೋ ಈ ಸೋನಂ ಗುಪ್ತಾ ಯಾರು ಅನ್ನೋದು ಮಾತ್ರ ಇನ್ನೂ ನಿಗೂಢವಾಗಿದೆ. ಹೊಸದಾಗಿ ಬಿಡುಗಡೆಯಾದ 2000 ರೂಪಾಯಿ ನೋಟುಗಳ ಮೇಲೂ ‘ಸೋನಂ ಗುಪ್ತಾ ಬೇವಫಾ ಹೈ’ ಎಂದು ಬರೆಯಲಾಗಿದೆ.

 

ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇರೋ ಕೆಲವು ನೋಟುಗಳ ಮೇಲೆ ಸೋನಂ ಪ್ರತಿಕ್ರಿಯೆ ಇದೆ. ಸಾಮಾಜಿಕ ತಾಣಗಳ ಬಳಕೆದಾರರ ಪ್ರಕಾರ ಸೋನಂ ಗುಪ್ತಾ ತನ್ನ ಪ್ರಿಯತಮನಿಗೆ ಬಲವಾದ ತಿರುಗೇಟು ನೀಡಿದ್ದಾಳಂತೆ. ‘ಸೋನಂ ಗುಪ್ತಾ ಬೇವಫಾ ಹೈ’ ಎಂದು ಬರೆದಿರುವ ನೋಟುಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು ಕೆಲವರು ಫನ್ನಿಯಾಗಿ ಟ್ವೀಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...