alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯಸಭೆಗೆ ಸೋನಾಲ್ ಮಾನ್ ಸಿಂಗ್ ಸೇರಿದಂತೆ ನಾಲ್ವರ ನಾಮಕರಣ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಖ್ಯಾತ ನೃತ್ಯ ಕಲಾವಿದೆ ಸೋನಾಲ್ ಮಾನ್ ಸಿಂಗ್ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುವ ಅಧಿಕಾರ ಹೊಂದಿರುವ ರಾಷ್ಟ್ರಪತಿಗಳು ಸೋನಾಲ್ ಮಾನ್ ಸಿಂಗ್, ಅಂಕಣಕಾರ ರಾಕೇಶ್ ಸಿನ್ಹಾ, ಶಿಲ್ಪ ಕಲಾವಿದ ರಘುನಾಥ್ ಮಹೋಪಾತ್ರ ಹಾಗೂ ರಾಮ್ ಶಕಾಲ್ ರನ್ನು ನೇಮಿಸಿದ್ದಾರೆ.

ರಾಜ್ಯಸಭಾ ಸದಸ್ಯರಾಗಿದ್ದ ಸಚಿನ್ ತೆಂಡೂಲ್ಕರ್, ರೇಖಾ, ಅನು ಆಗಾ ಹಾಗೂ ಕೆ. ಪರಾಶರನ್ ನಿವೃತ್ತಿ ಹೊಂದಿದ ಕಾರಣ ಖಾಲಿ ಉಳಿದಿದ್ದ ನಾಲ್ಕು ಸ್ಥಾನಗಳಿಗೆ ಈ ನೇಮಕವಾಗಿದೆ.

ಒಟ್ಟು 12 ಮಂದಿಯನ್ನು ರಾಜ್ಯಸಭೆಗೆ ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಗಳಿಗಿದ್ದು, ಮೇರಿ ಕೋಮ್, ಸ್ವಪನ್ ದಾಸ್ ಗುಪ್ತಾ, ಕೆ.ಟಿ.ಎಸ್. ತುಳಸಿ, ನರೇಂದ್ರ ಜಾಧವ್, ಸುಬ್ರಮಣಿಯನ್ ಸ್ವಾಮಿ, ರೂಪಾ ಗಂಗೂಲಿ, ಸುರೇಶ್ ಗೋಪಿ ಹಾಗೂ ಸಂಭಾಜಿ ಛತ್ರಪತಿ ಈಗಾಗಲೇ ನಾಮಕರಣಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...