alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ಟ್ರ್ಯಾಕ್ ನಲ್ಲಿ ಸಿಕ್ತು ಜೆಡಿಯು ಶಾಸಕಿ ಮಗನ ಶವ

ಬಿಹಾರದ ಜೆಡಿಯು ಶಾಸಕಿ ಭೀಮಾ ಭಾರತಿ ಮಗನ ಶವ ಪಾಟ್ನಾದ ರೈಲ್ವೆ ಟ್ರ್ಯಾಕ್ ಬಳಿ ಸಿಕ್ಕಿದೆ. ಸಾವಿಗೆ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಶಾಸಕಿ ಭೀಮಾ ಭಾರತಿ ಮಗನ ಶವ ಸಿಗ್ತಿದ್ದಂತೆ ಆರ್ಜೆಡಿ, ಸರ್ಕಾರದ ವಿರುದ್ಧ ಕಿಡಿಕಾರಿದೆ. ರಾಜ್ಯದಲ್ಲಿ ಅಪರಾಧಿಗಳ ಆಡಳಿತ ನಡೆಯುತ್ತಿದೆ ಎಂದು ದೂರಿದೆ. ಆರ್ಜೆಡಿ ಶಾಸಕ ಭಾಯಿ ವೀರೇಂದ್ರ, ಪಾಟ್ನಾ ಎಸ್ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ. ಅನೇಕ ವರ್ಷಗಳಿಂದ ಪಾಟ್ನಾದಲ್ಲಿಯೇ ಇರುವ ಎಸ್ಎಸ್ಪಿ ಮನು ಮಹಾರಾಜನ್ ರಕ್ಷಣೆ ಕೆಲಸ ಮಾಡ್ತಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂಥವರನ್ನು ಕೆಲಸದಿಂದ ತೆಗೆದು ಹಾಕಿದ್ರೆ ಬಿಹಾರ ಪರಿಸ್ಥಿತಿ ಸುಧಾರಿಸಲಿದೆ ಎಂದಿದ್ದಾರೆ.

ಮಗನ ಮರಣದ ಸುದ್ದಿ ಕೇಳ್ತಿದ್ದಂತೆ ಭೀಮಾ ಭಾರತಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಮಾ ಭಾರತಿ ಹಾಗೂ ಪತಿ ಮಧ್ಯೆ ಸಂಬಂಧ ಸರಿಯಿಲ್ಲವಂತೆ. ಕೆಲ ದಿನಗಳ ಹಿಂದಷ್ಟೇ ಪತಿ ಜೈಲಿನಿಂದ ಹೊರ ಬಂದಿದ್ದಾನೆ ಎನ್ನಲಾಗಿದೆ. ಭೀಮಾ ಭಾರತಿ ಮಗನ ಸಾವು ಕೊಲೆಯಾ ಅಥವಾ ಆತ್ಮಹತ್ಯೆಯಾ ಎಂಬ ಪ್ರಶ್ನೆಗೆ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...