alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಶವದ ಜೊತೆ ವಾಸವಾಗಿದ್ದ ಮಗ

ಮಧ್ಯ ಕೊಲ್ಕತ್ತಾದಲ್ಲಿ ಭಾನುವಾರ ಪೊಲೀಸರು 70 ವರ್ಷದ ಮಹಿಳೆ ಶವವನ್ನು ಆಕೆ ಮನೆಯಿಂದ ಹೊರಕ್ಕೆ ತೆಗೆದಿದ್ದಾರೆ. ಅಕ್ಕಪಕ್ಕದವರ ದೂರಿನ ಮೇಲೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ತಾಯಿಯ ಶವ ಸಂಸ್ಕಾರ ಮಾಡದೆ ಮೃತ ದೇಹದ ಜೊತೆ ಮಗ ವಾಸವಾಗಿದ್ದಾನೆಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.

ಮೃತ ಮಹಿಳೆ ಹೆಸರು ತಪಸಿ ದಾಸ್ ಎಂದು ಪೊಲೀಸರು ತಿಳಿಸಿದ್ದಾರೆ. ಮಗ ಕಾರ್ತಿಕ್ ತಾಯಿ ಶವದ ಜೊತೆ ವಾಸವಾಗಿದ್ದನಂತೆ. ಆತನ ಮಾನಸಿಕ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಕಪಕ್ಕದವರನ್ನು ಕಾರ್ತಿಕ್ ಮನೆಗೆ ಬರಲು ಬಿಡುತ್ತಿರಲಿಲ್ಲವಂತೆ.

ಮನೆಯಿಂದ ವಾಸನೆ ಬರುತ್ತಿತ್ತು. ಇದ್ರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಪಸಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಆಕೆ ಯಾವಾಗ ಸಾವನ್ನಪ್ಪಿದ್ದಾಳೆಂಬುದನ್ನು ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...