alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಕತ್ತು ಕತ್ತರಿಸಿ ಫೆವಿಕ್ವಿಕ್ ಹಚ್ಚಿದ ಮಗ

ಉತ್ತರ ಪ್ರದೇಶದ ಬಸ್ತಿಯಲ್ಲಿ ಮಗನೊಬ್ಬ ತನ್ನ ರಾಕ್ಷಸ ಮುಖ ತೋರಿಸಿದ್ದಾನೆ. ತಂದೆಯ ಕತ್ತನ್ನು ಕತ್ತರಿಸಿದ್ದಲ್ಲದೆ ಫೆವಿಕ್ವಿಕ್ ಹಾಕಿ ಅಂಟಿಸುವ ಪ್ರಯತ್ನ ನಡೆಸಿದ್ದಾನೆ.

ಘಟನೆ ಸೊನೊಹಾ ಪ್ರದೇಶದ ದರಿಯಾಪುರದಲ್ಲಿ ನಡೆದಿದೆ. ಇಲ್ಲಿನ ನಿವಾಸಿ 70 ವರ್ಷದ ರಾಮದೇವ್ ರೈಲ್ವೆ ಇಲಾಖೆಯ ನಿವೃತ್ತ ನೌಕರ. ಮಗ ಜಗದೀಶ್ ಮಿಶ್ರಾ ಜೊತೆ ರಾಮದೇವ್ ವಾಸವಾಗಿದ್ದಾರೆ. ಶನಿವಾರ ರಾಮದೇವ್ ಕೋಣೆಯಲ್ಲಿ ಕೂಗಿಕೊಂಡಿದ್ದಾನೆ. ಇದ್ರಿಂದ ಕೋಪಗೊಂಡ ಮಗ ತಂದೆ ಕತ್ತಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ.

ತಂದೆ ಪರಿಸ್ಥಿತಿ ಗಂಭೀರವಾಗ್ತಿದ್ದಂತೆ ಫೆವಿಕ್ವಿಕ್ ಹಚ್ಚಿದ್ದಾನೆ. ನಂತ್ರ ಮನೆ ಬಿಟ್ಟು ಓಡಿ ಹೋಗಿದ್ದಾನೆ. ತಂದೆ ಧ್ವನಿ ಕೇಳದಿರಲಿ ಎಂದು ದೊಡ್ಡದಾಗಿ ಟಿವಿ ಹಚ್ಚಿದ್ದ ಎನ್ನಲಾಗಿದೆ. ಮಗ ಓಡಿ ಹೋದ ನಂತ್ರ ಪಕ್ಕದ ಮನೆಯವರು ನೆರವಿಗೆ ಬಂದಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗನ ಹುಡುಕಾಟ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...