alex Certify
ಕನ್ನಡ ದುನಿಯಾ       Mobile App
       

Kannada Duniya

ಎಎಪಿ ಶಾಸಕ ಸೋಮನಾಥ್‌ ಭಾರತಿ ಪ್ರಕರಣ ಸುಖಾಂತ್ಯ

ಎಎಪಿ ಎಂಎಲ್‌ಎ ಸೋಮನಾಥ್‌ ಭಾರತಿ ಹಾಗೂ ಪತ್ನಿ ಲಿಪಿಕಾ ಮಿತ್ರಾ ಅವರ ನಡುವಿದ್ದ ಸಮಸ್ಯೆ ಇತ್ಯರ್ಥವಾಗಿದೆ. ದೆಹಲಿ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗಿದೆ. ದಂಪತಿ ನಡುವಿದ್ದ ತಪ್ಪು ತಿಳುವಳಿಕೆಯನ್ನು ಬಗೆಹರಿಸಲಾಗಿದೆ.

ದಂಪತಿ ಜತೆಯಲ್ಲೇ ಬಾಳ್ವೆ ಮಾಡಲು ಇಚ್ಚೆ ಪಡುತ್ತಿದ್ದಾರೆ ಎಂದು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸೋಮನಾಥ್‌ ಪರ ವಕೀಲ ಕೋರ್ಟ್‌ಗೆ ತಿಳಿಸಿದರು. ಹೀಗಾಗಿ ಸೋಮನಾಥ್‌ ಮೇಲೆ ಲಿಪಿಕಾ ಕೊಲೆ ಯತ್ನ, ಹಲ್ಲೆ, ಕಿರುಕುಳ ಆರೋಪಗಳಡಿ ನೀಡಿದ್ದ ದೂರು, ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಸೋಮನಾಥ್‌ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಇದನ್ನು ಆಲಿಸಿದ ನ್ಯಾಯಮೂರ್ತಿಗಳು, ಇಬ್ಬರೂ ಸರಿಯಾಗಿ ಹೊಂದಿಕೊಳ್ಳಲಿ. ಮಕ್ಕಳೊಂದಿಗೆ ಅವರು ಸಹಜ ಬಾಳ್ವೆ ಮಾಡಲಿ. ಆ ಬಳಿಕ ತೀರ್ಮಾನ ಕೈಗೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟು, 2019 ಮಾ7 ಕ್ಕೆ ಮುಂದೂಡಿದ್ದಾರೆ. ಅಲ್ಲದೆ ಟ್ರಯಲ್‌ ಕೋರ್ಟ್‌ನಲ್ಲಿನ ವಿಚಾರಣೆಗೆ ತಡೆ ನೀಡಿದ್ದಾರೆ.

ಇದಕ್ಕೂ ಮುನ್ನ ನೀವಿಬ್ಬರೂ ಜತೆಗಿರಲು ಬಯಸುತ್ತೀರಾ ಎಂದು ದಂಪತಿಯನ್ನೇ ನ್ಯಾಯಮೂರ್ತಿಗಳು ಕೇಳಿದ್ದು, ಈ ಪ್ರಶ್ನೆಗೆ ಇಬ್ಬರೂ ಒಪ್ಪಿಕೊಂಡಿದ್ದಾರೆ.
2015 ರ ಜೂ.10 ರಂದು ಲಿಪಿಕಾ, ಸೋಮನಾಥ್ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದರು.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...