alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಪೋರ್ಟ್ ಟಾಯ್ಲೆಟ್ ನಲ್ಲಿತ್ತು 70 ಲಕ್ಷ ಮೌಲ್ಯದ ಚಿನ್ನ

gold-990ಟಾಯ್ಲೆಟ್ ರೂಂ ಎಂದರೆ ಮೂಗು ಮುರಿಯುವವರೇ ಜಾಸ್ತಿ. ಆದರೆ ಇಂತಹ ಸ್ಥಳದಲ್ಲೂ ಚಿನ್ನದ ಖಜಾನೆಯಿರುತ್ತದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಾಶ್ ರೂಂ ನಲ್ಲಿ ಬರೋಬ್ಬರಿ 70 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.

ವಿಮಾನ ನಿಲ್ದಾಣದ ಕನ್ವೇಯರ್ ಬೆಲ್ಟ್ 5 ರ ಸಮೀಪದಲ್ಲಿದ್ದ ಪುರುಷರ ವಾಶ್ ರೂಂ ನ ಡಸ್ಟ್ ಬಿನ್ ನಲ್ಲಿ 1.3 ಕೆ.ಜಿ. ತೂಕದ ಬಂಗಾರದ ಆಭರಣಗಳು ಹಾಗೂ 1 ಕೆ.ಜಿ. ತೂಕದ ಗೋಲ್ಡ್ ಬಾರ್ ಗಳು ಸಿಕ್ಕಿದ್ದು, ಇವುಗಳ ಮೌಲ್ಯ 70.65 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದವರು ಸಿಕ್ಕಿ ಬೀಳುವ ಭಯದಲ್ಲಿ ಅಂತಿಮ ಕ್ಷಣದಲ್ಲಿ ವಾಶ್ ರೂಂ ನಲ್ಲಿ ಈ ಚಿನ್ನವನ್ನು ಎಸೆದಿರಬಹುದೆಂದು ಶಂಕಿಸಿರುವ ಅಧಿಕಾರಿಗಳು, ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...