alex Certify
ಕನ್ನಡ ದುನಿಯಾ       Mobile App
       

Kannada Duniya

ಹುತಾತ್ಮ ಯೋಧನ ಪುತ್ರಿಯ ನೆರವಿಗೆ ಧಾವಿಸಿದೆ ಐಎಎಸ್ ಅಧಿಕಾರಿ ಕುಟುಂಬ

prem-sagar-and-paramjit-singhನೆರೆ ರಾಷ್ಟ್ರ ಪಾಕಿಸ್ತಾನ ಸದಾ ತನ್ನ ದುರ್ಬುದ್ದಿ ತೋರುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತೀಯ ಯೋಧರಿಬ್ಬರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಪಾಕಿಸ್ತಾನದ ವಿರುದ್ದ ಭಾರತೀಯರು ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನದ ವಿರುದ್ದ ಭಾರತ ಪ್ರತೀಕಾರ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ.

ಈ ಮಧ್ಯೆ ಹುತಾತ್ಮ ಯೋಧ ಸುಬೇದಾರ್ ಪರಮ್ಜೀತ್ ಸಿಂಗ್ ಕುಟುಂಬಕ್ಕೆ ನೆರವಾಗಲು ಐಎಎಸ್ ಆಧಿಕಾರಿ ಮತ್ತವರ ಪತ್ನಿ ಮುಂದಾಗಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಐಎಎಸ್ ಅಧಿಕಾರಿ ಯೂನಸ್ ಖಾನ್ ಮತ್ತವರ ಪತ್ನಿ ಅಂಜುಮ್ ಆರಾ, ಹುತಾತ್ಮ ಯೋಧ ಪರಮ್ಜೀತ್ ಸಿಂಗ್ ರ 12 ವರ್ಷದ ಪುತ್ರಿ ಕುಶ್ದೀಪ್ ಕೌರ್ ಳ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸಲು ಸಿದ್ದರಾಗಿದ್ದಾರೆ.

ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮ ಯೋಧನ ಕುಟುಂಬಕ್ಕೆ ನಾವು ಸಲ್ಲಿಸುವ ಅಳಿಲು ಸೇವೆ ಎಂದಿರುವ ದಂಪತಿಗಳು, ಕುಶ್ದೀಪ್ ಕೌರ್ ಳ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಹುತಾತ್ಮ ಯೋಧನ ಕುಟುಂಬಸ್ಥರು ಒಪ್ಪಿಗೆ ಸೂಚಿಸಿರುವುದು ತಮಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...