alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತಪಟ್ಟನೆಂದು ಭಾವಿಸಲಾಗಿದ್ದ ಯೋಧ 7 ವರ್ಷಗಳ ನಂತರ ಮರಳಿದ

dharmaveer singh soldierಈ ಘಟನೆ ಬಾಲಿವುಡ್ ಚಿತ್ರವನ್ನು ಹೋಲುತ್ತಿದ್ದರೂ ಸತ್ಯ ಸಂಗತಿ. ಸೇನೆಯ 66 ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಭಾವಿಸಿದ್ದ ಮಧ್ಯೆ 7 ವರ್ಷಗಳ ಬಳಿಕ ಮರಳಿ ಮನೆಗೆ ಬಂದಿದ್ದಾರೆ.

7 ವರ್ಷಗಳ ಹಿಂದೆ ಡೆಹ್ರಾಡೂನ್ ನ ಚಕ್ರಥಾ ರಸ್ತೆಯಲ್ಲಿ ಸೇನಾ ವಾಹನ ಅಪಘಾತಕ್ಕೀಡಾದಾಗ, ವಾಹನದಲ್ಲಿದ್ದ 3 ಮಂದಿ ಸೈನಿಕರು ನಾಪತ್ತೆ ಆಗುತ್ತಾರೆ. ಕೆಲವು ದಿನಗಳ ನಂತರ ಇಬ್ಬರು ಯೋಧರು ಹಿಂತಿರುಗುತ್ತಾರಾದರೂ ಮತ್ತೊಬ್ಬ ಯೋಧ ಧರ್ಮವೀರ್ ಸಿಂಗ್ ಮರಳಿ ಬರಲೇ ಇಲ್ಲ.

ಇತ್ತ ಆತನ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಪತಿ ಬರುವ ನಿರೀಕ್ಷೆಯಲ್ಲೇ ಜೀವನ ಸಾಗಿಸುತ್ತಿದ್ದು, ಕಾಣೆಯಾಗಿ ಮೂರು ವರ್ಷಗಳಾದರೂ ಸುಳಿವು ಸಿಗದ ಕಾರಣ ಆತ ಮೃತಪಟ್ಟಿದ್ದಾನೆಂದು ಘೋಷಿಸಿದ ಸೇನೆ, ಕುಟುಂಬಕ್ಕೆ ಪಿಂಚಣಿ ನೀಡಲಾರಂಭಿಸಿತ್ತು.

ಆದರೆ ಅಂದು ಸಂಭವಿಸಿದ ಅಪಘಾತದಲ್ಲಿ ಧರ್ಮವೀರ್ ಸಿಂಗ್, ತನ್ನ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡು ಹರಿದ್ವಾರದಲ್ಲಿ ಭಿಕ್ಷೆ ಬೇಡುತ್ತಾ ಕಾಲ ಕಳೆಯುತ್ತಿದ್ದರು. ಇತ್ತೀಚೆಗೆ ನಡೆದ ಮತ್ತೊಂದು ಅಪಘಾತದಲ್ಲಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಮ್ಮ ಸ್ಮರಣ ಶಕ್ತಿಯನ್ನು ಪಡೆದುಕೊಂಡಿದ್ದಾರೆ. ಹೆಂಡತಿ, ಮಕ್ಕಳು, ಕುಟುಂಬ, ಹುಟ್ಟಿದ ಊರು ಸೇರಿದಂತೆ ಎಲ್ಲವೂ ಅವರ ನೆನಪಿಗೆ ಬಂದಿದೆ. ಅಪಘಾತವೆಸಗಿದ್ದ ಬೈಕ್ ಸವಾರ ನೀಡಿದ್ದ 500 ರೂ. ಹಣದಲ್ಲಿ ದೆಹಲಿಗೆ ಟಿಕೆಟ್ ಖರಿದಿಸಿದ್ದಲ್ಲದೇ ಅಲ್ಲಿಂದ ಅಲ್ವಾರ್ ಸಮೀಪದ ತಮ್ಮ ಗ್ರಾಮ ತಲುಪಿದ್ದಾರೆ ಧರ್ಮವೀರ್ ಸಿಂಗ್.

ಅವರನ್ನು 7 ವರ್ಷಗಳ ಬಳಿಕ ಜೀವಂತವಾಗಿ ನೋಡಿದ ಕುಟುಂಬ ಈಗ ಸಂತಸಗೊಂಡಿದೆ. ಧರ್ಮವೀರ್ ಸಿಂಗ್ ರ ಒಬ್ಬ ಮಗಳು 12 ನೇ ತರಗತಿಯಲ್ಲಿದ್ದರೆ ಮತ್ತೊಬ್ಬಾಕೆ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಧರ್ಮವೀರ್ ಸಿಂಗ್ ಅವರಿಗೆ ಮತ್ತಷ್ಟು ಚಿಕಿತ್ಸೆ ಕೊಡಿಸಲು ಅವರನ್ನು ಈಗ ಜೈಪುರಕ್ಕೆ ಕರೆದುಕೊಂಡು ಹೋಗಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...