alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣ ಮಾಡ್ತು ಕಮಾಲ್

avniಸಾಮಾಜಿಕ ಜಾಲತಾಣಗಳು ಸಾಮಾಜಿಕ ಜೀವನದಲ್ಲಿ ಇಂದು ಬಹು ಮುಖ್ಯ ಪಾತ್ರ ವಹಿಸಿವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದ್ದು, ತನ್ನ ಪೋಷಕರಿಂದ ಬೇರ್ಪಟ್ಟಿದ್ದ 4 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣದ ಸಹಾಯದಿಂದ ಕೇವಲ 20 ನಿಮಿಷಗಳಲ್ಲಿ ತನ್ನ ಪೋಷಕರ ಮಡಿಲು ಸೇರಿದ್ದಾಳೆ.

ನಾಗಪುರ ರೈಲು ನಿಲ್ದಾಣಕ್ಕೆ ತನ್ನ ತಾಯಿ ಹಾಗೂ ಚಿಕ್ಕಪ್ಪನ ಜೊತೆ ಬಂದಿದ್ದ ಆವನಿ ಜೈನ್ ಎಂಬ ಬಾಲಕಿ ತನ್ನ ಪೋಷಕರಿಂದ ಬೇರೆಯಾಗಿದ್ದಳು. ಬಳಿಕ ಆಕೆ ಅಳುತ್ತಾ ನಿಂತಿದ್ದನ್ನು ಗಮನಿಸಿದ ರೈಲ್ವೇ ಪೊಲೀಸರು ಆಕೆಯ ಫೋಟೋ ತೆಗೆದು ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು.

ಇತ್ತ ಆವನಿ ಕಾಣದಿದ್ದರಿಂದ ಕಂಗಾಲಾಗಿದ್ದ ಆಕೆಯ ತಾಯಿ ಸುನೈನಾ ಜೈನ್ ಹಾಗೂ ಚಿಕ್ಕಪ್ಪ ಸಂದೇಶ್ ಜೈನ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಅಷ್ಟರಲ್ಲಾಗಲೇ ವಾಟ್ಸಾಪ್ ಗ್ರೂಪ್ ನಲ್ಲಿ ಆವನಿ ಫೋಟೋ ನೋಡಿದ್ದ ಅವರ ಸಂಬಂಧಿಕರು, ಸುನೈನಾ ಜೈನ್ ಗೆ ಕರೆ ಮಾಡಿ ರೈಲ್ವೇ ಪೊಲೀಸರ ಬಳಿ ಆವನಿ ಜೈನ್ ಇರುವ ವಿಷಯ ತಿಳಿಸಿದ್ದಾರೆ. ಕೂಡಲೇ ಅಲ್ಲಿಗೆ ಧಾವಿಸಿದ ತಾಯಿ, ಮಗಳನ್ನು ಕರೆದುಕೊಂಡು ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...