alex Certify
ಕನ್ನಡ ದುನಿಯಾ       Mobile App
       

Kannada Duniya

ದೋಚಿದ್ದ ಹಣವನ್ನು ಸ್ಥಳದಲ್ಲೇ ವಾಪಸ್ ಕೊಟ್ಟ ಕಳ್ಳರು

noyda

ಗ್ರೇಟರ್ ನೋಯ್ಡಾ: ದರೋಡೆಕೋರರಿಗೆ ಸ್ವಲ್ಪ ಅವಕಾಶ ಸಿಕ್ಕರೆ ಸಾಕು, ತಮ್ಮ ಕೈಚಳಕ ತೋರಿಸಿ ಕ್ಷಣಾರ್ಧದಲ್ಲಿ ಮರೆಯಾಗುತ್ತಾರೆ.

ಆದರೆ, 1000 ರೂ. ಮತ್ತು 500 ರೂ. ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದು ದರೋಡೆಕೋರರಿಗೂ ನುಂಗಲಾರದ ತುತ್ತಾಗಿದೆ. ದರೋಡೆಕೋರರಿಬ್ಬರು ಕಾರ್ಮಿಕನೊಬ್ಬನನ್ನು ಬೆದರಿಸಿ, ಹಣ ದೋಚಿದ್ದಲ್ಲದೇ, ಸ್ವಲ್ಪ ಸಮಯದ ಬಳಿಕ, ಹಣ ವಾಪಸ್ ಮಾಡಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ವಿಕಾಸ್ ಕುಮಾರ್ ಎಂಬ ಕಾರ್ಮಿಕ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ  ಬೈಕ್ ನಲ್ಲಿ ಇಬ್ಬರು ಎದುರಾಗಿದ್ದಾರೆ. ಬೆದರಿಸಿ ಆತನ ಬಳಿ ಇದ್ದ ಪರ್ಸ್ ದೋಚಿ, ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ವಿಕಾಸ್ ಕುಮಾರ್ ಬಳಿ 500 ರೂ ಮುಖಬೆಲೆಯ 3 ನೋಟುಗಳಷ್ಟೇ ಇದ್ದವು.

ವಿಕಾಸ್ ಕುಮಾರ್ ಅಲ್ಲಿಂದ ಸ್ವಲ್ಪ ದೂರ ಬರುವಷ್ಟರಲ್ಲಿ ವಾಪಸ್ ಬಂದ ದುಷ್ಕರ್ಮಿಗಳು, ಆತನ ಮೇಲೆ ಹಲ್ಲೆ ಮಾಡಿ 100 ರೂಪಾಯಿ ನೋಟು ಇಟ್ಟುಕೊಳ್ಳಲು ಆಗಲ್ಲವೇ ಎಂದು ಹೇಳಿದ್ದು, ದೋಚಿದ್ದ ಹಣ ವಾಪಸ್ ಮಾಡಿದ್ದಾರೆ.

ಬಳಿಕ ವಿಕಾಸ್ ಕಾಸ್ನಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...