alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನದ ಓಲೆ ಕದಿಯಲು ಮಹಿಳೆಯ ಕಿವಿಗೇ ಕತ್ತರಿ

ದೆಹಲಿಯಲ್ಲಿ ಮಹಿಳೆಯೊಬ್ಬಳ ಕಿವಿಯೋಲೆ ಕದಿಯಲು ಕಳ್ಳನೊಬ್ಬ ಅವಳ ಕಿವಿಯನ್ನೇ ಕತ್ತರಿಸಿ ಹಾಕಿದ್ದಾನೆ. ಉತ್ತಮ್ ನಗರ ಮೆಟ್ರೋ ಸ್ಟೇಶನ್ ಬಳಿ ಸಂಜೆ 6 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ವಂದನಾ ಶರ್ಮಾ ಎಂಬ ಮಹಿಳೆ ಸಂಬಂಧಿಕರ ಅಂತ್ಯಸಂಸ್ಕಾರ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ರು.

ಬಸ್ ನಿಂದ ಇಳಿದು ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಆಕೆಯ ಕಿವಿಗೆ ಕೈಹಾಕಿದ್ದಾನೆ. ಒಂದು ಓಲೆ ಸುಲಭವಾಗಿ ಅವನಿಗೆ ಸಿಕ್ಕಿದೆ. ಇನ್ನೊಂದು ಓಲೆ ಎಷ್ಟು ಎಳೆದರೂ ಬಂದಿಲ್ಲ, ಆಗ ಆತ ಕಿವಿಯನ್ನೇ ಕಟ್ ಮಾಡಿದ್ದಾನೆ.

ಕಿವಿಯಿಂದ ರಕ್ತ ಸೋರುತ್ತಿತ್ತು, ನೋವು ಹಾಗೂ ಶಾಕ್ ನಿಂದಾಗಿ ವಂದನಾಗೆ ಮಾತೇ ಹೊರಡಲಿಲ್ಲ. ಆಕೆ ರಸ್ತೆಯಲ್ಲೇ ಕುಸಿದು ಕುಳಿತಿದ್ರು. ಓಲೆ ಕಿತ್ತಿದ್ದ ಕಳ್ಳ ಅವಳ ಕಣ್ಣೆದುರಲ್ಲೇ ಪರಾರಿಯಾಗಿದ್ದ. ಹತ್ತಿರದಲ್ಲೇ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಆತನ ಮುಖ ಸೆರೆಯಾಗಿಲ್ಲ. ವಂದನಾಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...