alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ನಾಗದೇವತೆ ನೋಡಲು ಮುಗಿಬಿದ್ದ ಜನ

up-snake

ಲಖ್ನೋ: ಹಾವು ಕೊರಳಗೆ ಸುತ್ತಿಕೊಂಡು, ಯುವತಿ ವಿಚಿತ್ರವಾಗಿ ವರ್ತಿಸಿದ್ದರಿಂದ, ಆಕೆಯನ್ನು ನಾಗದೇವತೆ ಎಂದು ಗ್ರಾಮಸ್ಥರು ಪೂಜಿಸಿದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಮನೆಮುಂದೆ ಮಲಗಿದ್ದ ಯುವತಿಯ ಮೇಲೆ ಬರೋಬ್ಬರಿ 3 ಗಂಟೆಗಳ ಕಾಲ ಹಾವೊಂದು ಹರಿದಾಡಿದ್ದು, ಈ ಸಂದರ್ಭದಲ್ಲಿ ಯುವತಿ ವಿಚಿತ್ರವಾಗಿ ವರ್ತಿಸಿದ್ದಾಳೆ. ಆಕೆಯನ್ನು ಹಾವಿನಿಂದ ರಕ್ಷಿಸುವ ಬದಲಿಗೆ ಪೋಷಕರು ಹಾಗೂ ಗ್ರಾಮಸ್ಥರು ಪೂಜಿಸಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಈಕೆಯ ಮೈಮೇಲೆ ಹರಿದಾಡಿದ ಹಾವು ಯಾವುದೇ ಹಾನಿ ಉಂಟು ಮಾಡಿಲ್ಲ.

ಕಾನ್ಪುರ್ ಸಮೀಪದ ಪತಾರಾ ಅರಖೈಯಾ ಗ್ರಾಮದ ಶ್ರವಣ್ ಕುಮಾರ್ ಅವರ ಪುತ್ರಿ ಖುಷ್ಬು, ಮನೆಯ ಎದುರು ಇದ್ದ ಸಂದರ್ಭದಲ್ಲಿ ಹಾವು ಸುತ್ತಿಕೊಂಡಿದೆ. ಆಕೆ ಚಿತ್ರವಾಗಿ ವರ್ತಿಸಿದ್ದರಿಂದ ನಾಗದೇವತೆಯ ಅವತಾರ ಎಂದು ಗ್ರಾಮಸ್ಥರು ಪೂಜಿಸಿದ್ದಾರೆ. ಆಕೆಯನ್ನು ನೋಡಲು ಸುತ್ತಲಿನ ಗ್ರಾಮಸ್ಥರು ಆಗಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...