alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಪ ದಂಪತಿ ರಕ್ಷಣೆಗೆ ಜೀವವನ್ನು ಪಣಕ್ಕಿಟ್ಟ ಪೊಲೀಸ್

cobra-snake-2

ತಮ್ಮ ಜೀವವನ್ನು ಪಣಕ್ಕಿಟ್ಟು ಮತ್ತೊಂದು ಜೀವಿಯ ಪ್ರಾಣ ಉಳಿಸಿದ್ದಾರೆ ಹಿಮಾಚಲ ಪ್ರದೇಶ ಪೊಲೀಸರು. ಈ ವಿಷಯ ಎಲ್ಲೆಡೆ ಹರಡಿದ್ದು, ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ಬರ್ತಾ ಇದೆ.

ಅಷ್ಟಕ್ಕೂ ಪೊಲೀಸರು ಮಾಡಿರುವ ಕಾರ್ಯ ಸರ್ಪದ ಜೋಡಿಯನ್ನು ರಕ್ಷಿಸಿದ್ದು. ನಾಗ ಹಾಗೂ ನಾಗಿನ್ ಮೋಜಿನ ಮೂಡಿನಲ್ಲಿದ್ದರು. ಗಲಾಟೆ, ಶಬ್ದಗಳಿಲ್ಲದ ಜಾಗದ ಹುಡುಕಾಟದಲ್ಲಿದ್ದರು. ಆದ್ರೆ ದಾರಿ ತಪ್ಪಿ ಡಾಮರು ತುಂಬಿದ್ದ ಡಬ್ಬದೊಳಗೆ ಬಿದ್ದಿವೆ. ಅಲ್ಲಿಂದ ಹೊರಬರಲಾಗದೆ ಒದ್ದಾಡಿವೆ.

ಡಬ್ಬದಿಂದ ಹೊರಬರಲು ಸಾಕಷ್ಟು ಪ್ರಯತ್ನಪಟ್ಟಿವೆ. ಅದ್ರ ಶಬ್ದ ಪೊಲೀಸರಿಗೆ ಕೇಳಿಸಿದೆ. ಪರಿಸ್ಥಿತಿ ಅರಿತ ಪೊಲೀಸರು ರಕ್ಷಣಾ ಕಾರ್ಯ ಶುರುಮಾಡಿದ್ದಾರೆ. ಡಾಮರನ್ನು ಸ್ವಲ್ಪ ಕರಗಿಸಿ ಹೇಗೋ ಒಂದೊಂದೇ ಸರ್ಪಗಳನ್ನು ಹೊರತೆಗೆದಿದ್ದಾರೆ. ಅಷ್ಟೇ ಅಲ್ಲ ಅವುಗಳಿಗೆ ಗಂಗಾ ಸ್ನಾನ ಮಾಡಿಸಿದ್ದಾರೆ. ಕೆಲ ನಿಮಿಷಗಳ ಕಾಲ ಅಲ್ಲೇ ಇದ್ದ ಸರ್ಪದ ಜೋಡಿ, ಮನುಷ್ಯನ ಕಣ್ಣು ತಪ್ಪಿಸಿ ನಾಪತ್ತೆಯಾಗಿದೆ. ಹಾವು ಕಂಡ್ರೆ ದೂರ ಓಡುವವರು ಜಾಸ್ತಿ. ಹೀಗಿರುವಾಗ ಎರಡು ಹಾವುಗಳನ್ನು ರಕ್ಷಿಸಿ, ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...