alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಬೋಗಿಯಲ್ಲಿ ಹಾವು ಕಂಡು ಬೆಚ್ಚಿಬಿದ್ರು ಪ್ರಯಾಣಿಕರು

ಗುರುವಾರದಂದು ಕೊಯಮತ್ತೂರು-ಚೆನ್ನೈ ಸೆಂಟ್ರಲ್ ಚೇರನ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ಬಿ-3 ತ್ರೀ ಟೈಯರ್ ಎಸಿ ಕಂಪಾರ್ಟ್ಮೆಂಟ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಇವರುಗಳಿದ್ದ ಬೋಗಿಯಲ್ಲಿ ವಿಷಪೂರಿತ ಹಾವೊಂದು ಕಂಡು ಬಂದಿದ್ದು, ಬಳಿಕ ಅದನ್ನು ಹಿಡಿಯಲಾಗಿದೆ.

ಈ ರೈಲಿನಲ್ಲಿ ಕೊಯಮತ್ತೂರಿನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ನಿಲ್ದಾಣ ಸಮೀಪಿಸಿದ ಕಾರಣ ಲಗೇಜ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಹಾವು ಕಂಡು ಬಂದಿದ್ದು, ಇದನ್ನು ನೋಡಿ ಅವರು ಕೂಗಿಕೊಂಡಿದ್ದಾರೆ. ಬಳಿಕ ಬೋಗಿಯಲ್ಲಿದ್ದ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ರೈಲ್ವೇ ಪೊಲೀಸರು ಹಾವನ್ನು ಹಿಡಿದು ಹೊರ ಬಿಟ್ಟಿದ್ದಾರೆ. ರೈಲು ಹೊರಡುವ ಮುನ್ನ ಸ್ವಚ್ಚತೆ ಕೈಗೊಳ್ಳಲಾಗುತ್ತಿದ್ದು, ಆದರೂ ಹಾವು ಒಳ ಬಂದಿದ್ದು ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ರೈಲ್ವೇ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...