alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರ ಆತಂಕಕ್ಕೆ ಕಾರಣವಾಯ್ತು ಬೋಗಿಯಲ್ಲಿ ಕಾಣಿಸಿಕೊಂಡ ಹಾವು

ಮುಂಬೈನ ಲೋಕಲ್ ಟ್ರೈನ್ ನಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಗುರುವಾರ ಬೆಳಿಗ್ಗೆ ಟಿಟವಾಲಾದಿಂದ ಸಿಎಸ್ಟಿಎಂಗೆ ಹೋಗ್ತಿದ್ದ ರೈಲಿನಲ್ಲಿ ಹಾವು ಕಾಣಿಸಿಕೊಂಡಿತ್ತು. ರೈಲಿನ ಬೋಗಿಯೊಂದರ ಹಿಡಿಕೆ ಮೇಲೆ ಹಾವು ಕಾಣಿಸಿಕೊಂಡಿತ್ತು. ಇದು ಪ್ರಯಾಣಿಕನೊಬ್ಬನ ಕಣ್ಣಿಗೆ ಬಿದ್ದಿದೆ.

ಹಾವು ಕಾಣ್ತಿದ್ದಂತೆ ಬೋಗಿಯಲ್ಲಿದ್ದ ಜನರು ಭಯಗೊಂಡಿದ್ದಾರೆ. ಥಾಣೆ ನಿಲ್ದಾಣಕ್ಕೆ ರೈಲು ಬರ್ತಿದ್ದಂತೆ ಹಾವಿದ್ದ ಬೋಗಿಯನ್ನು ಖಾಲಿ ಮಾಡಲಾಗಿದೆ. ನಂತ್ರ ಹಾವನ್ನು ಹೊರ ಹಾಕಿದ ನಂತ್ರ ರೈಲು ಮುಂದೆ ಸಾಗಿದೆ. ಹಾವು ಹೊರ ಹೋಗ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ರೈಲ್ವೆ ಸಿ ಪಿ ಆರ್ ಒ  ಮಾತ್ರ ಇಂಥ ಯಾವುದೇ ಘಟನೆ ಬಗ್ಗೆ ವರದಿಯಾಗಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾವಿರುವ ವಿಡಿಯೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...