alex Certify
ಕನ್ನಡ ದುನಿಯಾ       Mobile App
       

Kannada Duniya

ಮೂಢನಂಬಿಕೆಯನ್ನು ನಂಬಿ ಹಸುಳೆ ಜೀವವನ್ನು ಬಲಿಕೊಟ್ಟ ಪೋಷಕರು

ತಮ್ಮ ಮಗುವಿಗೆ ನಾಗದೇವತೆಯ ಆರ್ಶೀವಾದ ಸಿಗಲಿ ಎಂದ ಹೆತ್ತವರು ಮಗುವನ್ನು ಹಾವಾಡಿಗನ ಕೈಗೆ ಒಪ್ಪಿಸಿ ಮಗುವನ್ನು ಕಳೆದುಕೊಂಡ ಘಟನೆ ಛತ್ತಿಸ್ ಗಢದಲ್ಲಿ ನಡೆದಿದೆ.

ಮೂಢನಂಬಿಕೆಯನ್ನು ನಂಬಬೇಡಿ ಎಂದು ಯಾರು ಎಷ್ಟೇ ಹೇಳಿದರೂ ಜನ ಮಾತ್ರ ತಾವು ನಂಬಿದ್ದನ್ನು ಬಿಡುವುದಿಲ್ಲ.ಈ ಪಾಲಕರದ್ದೂ ಅದೇ ಕಥೆ. ತಮ್ಮ ಐದು ತಿಂಗಳ ಮಗು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರಿಂದ ಈ ಪಾಲಕರು ಹಾವಾಡಿಗನ ಮಾತಿಗೆ ಕಟ್ಟು ಬಿದ್ದು ನಾಗದೇವತೆಯ ಆರ್ಶೀವಾದ ಸಿಗುತ್ತದೆ ಎಂದು ನಂಬಿ ಹಾವಾಡಿಗನ ಕೈಗೆ ಮಗುವನ್ನು ಒಪ್ಪಿಸಿದ್ದಾರೆ.

ಈ ಹಾವಾಡಿಗ ಮಗುವಿನ ಕುತ್ತಿಗೆಗೆ ಹಾವನ್ನು ಸುತ್ತಿ ಪೂಜೆ ಶುರುಮಾಡಿದ್ದು, ಆಗ ಮಗುವಿಗೆ ಹಾವು ಕಚ್ಚಿದೆ. ಆದರೂ ಹಾವು ವಿಷಪೂರಿತವಲ್ಲ ಎಂದು ಹಾವಾಡಿಗ ಹೇಳಿದ್ದು ಕೇಳಿ ಪೋಷಕರು ಸುಮ್ಮನಾದರು. ನಂತರ ಮಗುವಿಗೆ ವಿಷವೇರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಮಗು ಮೃತಪಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...